Saturday, 13 March 2021

ಶ್ರೀರಾಮನೆ ಬಾರೊ ಬೇಗನೆ ಸಾರಿಕೊಂಬೆನು ankita indiresha

 ರಾಗ -  :  ತಾಳ -


ಶ್ರೀರಾಮನೆ ಬಾರೊ ಬೇಗನೆ l  ಸಾರಿಕೊಂಬೆನು ll ಪ ll


ಬಾರದಿರಲು ಕಾರಣಾವದು ತಾರಿಸೂವದು ಸರಸಿಜನಯನನೆ ll ಅ ಪ ll


ರಾವಣಾರಿಯೆ ಶ್ರೀವಧೂಟಿಯೆ ಪಾವನಾಮೃತಾ l

ತೀವ ಸತ್ಕಥಾ ಸೇವಿಸೂವೆವು ಪರಂತರ ಅರಿಧರ ವರದಾ ll 1 ll


ಭಕ್ತಭಾಷಣ ನಿತ್ಯಪೋಷಣ ಕೃತ್ಯ ಕೋವಿದ l

ಚಿತ್ರ ವೈಭವ ಶತ್ರುಸೂದನ ಧುರಂಧರ ಪರತರ ಸುಗುಣ ll 2 ll


ಇಂದಿರೇಶನೆ ನಂದಸೂನುನೆ ನಂದು ಪ್ರಾರ್ಥನಾಮಿಂದು ಕೇಳೊ l

ಸಿಂಧುರೇಷ್ಟದ ಪುರಂದರ ಪರಮ ಹಿತಕರ ಶ್ರೀರಾಮನೆ ll 3 ll

***


No comments:

Post a Comment