Saturday, 13 March 2021

ಗಿರಿಧರ ಪರಮ ಮಂಗಲಾ ಕರುಣಾನಿಧಿ ankita bhupati vittala

 ರಾಗ - : ತಾಳ - 


ಗಿರಿಧರ ಪರಮ ಮಂಗಲಾ ಕರುಣಾನಿಧಿ

ಶರಣಾಗತ ಭಕ್ತವತ್ಸಲಾ ll ಪ ll


ತಂದೆ ತಾಯಿ ಸೇವಾಸಕ್ತ ಪುಂಡಲೀಕನ ಭಕ್ತಿಗೊಲಿದು

ಭಕ್ತಕೊಟ್ಟ ಇಟ್ಟಿಗೆಯ ಮೇಲೆ

ಟೊಂಕದ ಮೇಲೆ ಕೈ ಇಟ್ಟು ನಿಂತೆ ll 1 ll


ಬೆಟ್ಟದೊಳಗೆ ಹುತ್ತಿನಲ್ಲಿ ಪೆಟ್ಟುತಿಂದು ಪದ್ಮಾವತಿಯ

ಎಷ್ಟು ಸಾಲ ಮಾಡಿಕಡೆಗೆ ಪಟ್ಟದರಸಿ ಮಾಡಿಕೊಂಡೆ ll 2 ll


ಮಣ್ಣು ಹೆಂಟಿಯೊಳಗೆ ನೀನು ಪೂರ್ಣಪ್ರಜ್ಞರಿಗೆ ಒಲಿದು

ಬೆಣ್ಣೆ ಕಡಗೋಲಪಿಡಿದ ಕೃಷ್ಣ ಅನ್ನಬ್ರಹ್ಮನಾಗಿ ಮೆರೆವೆ ll 3 ll


ಅನ್ನಬ್ರಹ್ಮ ನಾದಬ್ರಹ್ಮ ಕಾಂಚಾಣದ ಬ್ರಹ್ಮ ನೀನು

ದೈನ್ಯಬಿಡಿಸಿ ಜ್ಞಾನ ಭಕ್ತಿಕೊಟ್ಟು ಕಾಪಾಡೊ ಸ್ವಾಮಿ ll 4 ll


ಆಪದ್ಭಾಂಧವ ಅನಾಥ ಬಂಧೋ ತಾಪತ್ರಯ ಬಿಡಿಸು ದೇವಾ

ಕೈಪಿಡಿದು ಉದ್ಧರಿಸು ಭೂಪತಿ ವಿಟ್ಠಲನಭಕ್ತರ ಕೃಷ್ಣ ll 5 ll

***


No comments:

Post a Comment