ಬಂದ್ಯಾ ವಿಟ್ಠಲ ಆನಂದವಾಯಿತು ನಂದಕಂದ
ಗೋವಿಂದ ಮುಕುಂದಾ ll ಪ ll
ಹಿಂದಿನ ಹಿರಿಯರ ಪುಣ್ಯ ಫಲಿಸಿತು
ಮುಂದಿನವರಿಗೆ ಅಭ್ಯುದವಾಯಿತು
ತಂದೆ ತಾಯಿ ಬಂಧು ಬಳಗವು ನೀನೇ
ಪುಂಡರೀಕ ವರದ ಪಂಢರಿರಾಯಾ ll 1 ll
ಪತಿತಃ ಪಾವನ ಪಾದ ಶತಕೋಟಿ ರವಿತೇಜ
ಟೊಂಕದ ಮೇಲೆ ಕೈಯಿಟ್ಟು ಇಟ್ಟಿಗೆ ಮೇಲೆ ನಿಂತಾ
ಸತ್ಯ ಸಂಕಲ್ಪ ನೀ ನಿತ್ಯ ತೃಪ್ತನು ನಿನ್ನ
ಭಕ್ತ ವಾತ್ಸಲ್ಯಕ್ಕೆ ಮಿತಿಯಿಲ್ಲವಯ್ಯಾ ll 2 ll
ಇನ್ನು ಎನ್ನಯ ಬಂಧವು ತೀರಿತು
ಮುನ್ನ ಬರುವ ಕ್ಲೇಶವು ದೂರಾಯಿತು
ಧನ್ಯನಾದೆ ನರಜನ್ಮ ಸಾರ್ಥಕವಾಯ್ತು ಪ್ರ
ಸನ್ನ ಭೂಪತಿವಿಟ್ಠಲ ರುಕ್ಮಿಣಿ ರಮಣಾ ll 3 ll
***