Friday, 21 May 2021

ಬಂದ್ಯಾ ವಿಟ್ಠಲ ಆನಂದವಾಯಿತು ನಂದಕಂದ ankita bhupati vittala

ಬಂದ್ಯಾ ವಿಟ್ಠಲ ಆನಂದವಾಯಿತು ನಂದಕಂದ 

ಗೋವಿಂದ ಮುಕುಂದಾ ll ಪ ll


ಹಿಂದಿನ ಹಿರಿಯರ ಪುಣ್ಯ ಫಲಿಸಿತು

ಮುಂದಿನವರಿಗೆ ಅಭ್ಯುದವಾಯಿತು 

ತಂದೆ ತಾಯಿ ಬಂಧು ಬಳಗವು ನೀನೇ

ಪುಂಡರೀಕ ವರದ ಪಂಢರಿರಾಯಾ ll 1 ll


ಪತಿತಃ ಪಾವನ ಪಾದ ಶತಕೋಟಿ ರವಿತೇಜ 

ಟೊಂಕದ ಮೇಲೆ ಕೈಯಿಟ್ಟು ಇಟ್ಟಿಗೆ ಮೇಲೆ ನಿಂತಾ

ಸತ್ಯ ಸಂಕಲ್ಪ ನೀ ನಿತ್ಯ ತೃಪ್ತನು ನಿನ್ನ

ಭಕ್ತ ವಾತ್ಸಲ್ಯಕ್ಕೆ ಮಿತಿಯಿಲ್ಲವಯ್ಯಾ ll 2 ll


ಇನ್ನು ಎನ್ನಯ ಬಂಧವು ತೀರಿತು

ಮುನ್ನ ಬರುವ ಕ್ಲೇಶವು ದೂರಾಯಿತು

ಧನ್ಯನಾದೆ ನರಜನ್ಮ ಸಾರ್ಥಕವಾಯ್ತು ಪ್ರ

ಸನ್ನ ಭೂಪತಿವಿಟ್ಠಲ ರುಕ್ಮಿಣಿ ರಮಣಾ ll 3 ll

***


No comments:

Post a Comment