Showing posts with label ಕಾಸು ಕನಕದಾಸೆಯಾದುದೇ ಹರಿಗೆ ದಾಸ ಜನರನೆಲ್ಲ govinda. Show all posts
Showing posts with label ಕಾಸು ಕನಕದಾಸೆಯಾದುದೇ ಹರಿಗೆ ದಾಸ ಜನರನೆಲ್ಲ govinda. Show all posts

Monday, 11 November 2019

ಕಾಸು ಕನಕದಾಸೆಯಾದುದೇ ಹರಿಗೆ ದಾಸ ಜನರನೆಲ್ಲ ankita govinda

by ಗೋವಿಂದದಾಸ
ಕಾಸು ಕನಕದಾಸೆಯಾದುದೇ | ಹರಿಗೆ |ದಾಸ ಜನರನೆಲ್ಲ ಮರೆತನೇ ಕಡೆಗೆ ಪ

ವಾಸುದೇವನು ಶ್ರೀನಿವಾಸನೆನಿಸಿಕೊಂಡು |ಶೇಷಗಿರಿಯ ಮೇಲೆ ವಾಸವಾಗಿರುವವಗೆಅ.ಪ

ಛಪ್ಪನ್ನದೇಶದ ಕಪ್ಪವ ತರಿಸುವ | ಒಪ್ಪಿ ಜನರಸರ್ವ ತಪ್ಪಪಾಲಿಸುವ |ಸರ್ಪಶಯನ ನಮ್ಮ ತಾಪತ್ರೆ ಘನವೆನಲು |ಅರ್ಪಿತವಹುದೇತಿಮ್ಮಪ್ಪ| ವೆಂಕಟ ಪತಿಗೆ ||ಕಾಸು||1

ಶನಿವಾರ ಶನಿವಾರ ಮನೆ ಮನೆ ಭಿಕ್ಷೆಗೈದು |ಮಿನುಗುವ ಡಬ್ಬಿಯೊಳಿಟ್ಟು ಜನರು ಪೂಜಿಸೆ ನಲಿದು |ವನಜಾಕ್ಷ ನಿನಗೆಂದು ಕಣಜಕ್ಕೆ ಸುರಿಯೆ ತಂದು |ಮನುಮಥ ಪಿತಗೆ ನಮ್ಮ ನೆನಪು ಎಂತಹುದೋ ||ಕಾಸು||2

ಗಂಧಚಂದನನಾಮತೀರ್ಥ ಪ್ರಸಾದ |ಸುಂದರವಾಹನಹರಕೆ ವಿನೋದ |ಚಂದದಿ ನೋಡಲ್ ಹರಿಯ ಧನವಿಲ್ಲದಾಗದ |ಸುಂದರಾಮೂರ್ತಿಗೋವಿಂದಗೆ ಸಾರ್ವದಾಟ....
(missing last line?)