ರಾಗ ಅಭೋಗಿ ಆದಿತಾಳ
1st Audio by Mrs. Nandini Sripad
ಏನ ಹೇಳಲಿ ನರಹರಿ ನಿನ್ನ ಮಹಿಮೆಯನು ॥ ಪ ॥
ನಿನ್ನ ಧ್ಯಾನ ಮಾಡೇನೆಂದರೆ ನಿಲ್ಲಗೊಡದು ಮನ ॥ ಅ ಪ ॥
ಸಚ್ಚಿದಾನಂದನ ಪಾದಾರವಿಂದವ ।
ಮೆಚ್ಚಿ ಹಸನಾಗಿರುವೆಂದಡೆ ॥
ಹುಚ್ಚಿದ್ದ ಕಪಿಯಂತೆ ವಿಷಯವೆಂಬಡವಿಯಲಿ ।
ಕಿಚ್ಚು ಕೊಂಗೊಂಡು ಎನ್ನ ಕಾಡುತಿದೆ ರಂಗ ॥ 1 ॥
ವಾಸುದೇವನ ಗುಣಂಗಳ ಸ್ತುತಿಸದೆ ದು - ।
ರಾಸೆಯೊಳು ಬಿದ್ದು ಕಾಡಿಸುವದೆ ॥
ಲೇಸಾಗಿ ನಾಯಿಬಾಲಕೆ ನಾರಾಯಣ ತೈಲ ।
ಏಸು ಬಾರಿ ತೀಡಿದರೆ ನೀಟಾಗುವುದೇ ॥ 2 ॥
ಸಾಧು ಸಜ್ಜನರ ಸಂಗವ ಮಾಡಲೊಲ್ಲದೆ ।
ಬಾಧಿಸುತಿದೆ ದುಷ್ಟ ಸಂಗದಿಂದ ॥
ಮಾಧವ ಭಕ್ತವತ್ಸಲ ಹಯವದನನೆ ।
ನೀ ದಯಮಾಡಿ ನಿನ್ನಂತೆ ಮಾಡೆನ್ನ ಮನ ॥ 3 ॥
*********
ಶ್ರೀ ವಾದಿರಾಜರ ಕೃತಿ
ರಾಗ ಅಭೋಗಿ ಆದಿತಾಳ
ಏನ ಹೇಳಲಿ ನರಹರಿ ನಿನ್ನ ಮಹಿಮೆಯನು ॥ ಪ ॥
ನಿನ್ನ ಧ್ಯಾನ ಮಾಡೇನೆಂದರೆ ನಿಲ್ಲಗೊಡದು ಮನ ॥ ಅ ಪ ॥
ಸಚ್ಚಿದಾನಂದನ ಪಾದಾರವಿಂದವ ।
ಮೆಚ್ಚಿ ಹಸನಾಗಿರುವೆಂದಡೆ ॥
ಹುಚ್ಚಿದ್ದ ಕಪಿಯಂತೆ ವಿಷಯವೆಂಬಡವಿಯಲಿ ।
ಕಿಚ್ಚು ಕೊಂಗೊಂಡು ಎನ್ನ ಕಾಡುತಿದೆ ರಂಗ ॥ 1 ॥
ವಾಸುದೇವನ ಗುಣಂಗಳ ಸ್ತುತಿಸದೆ ದು - ।
ರಾಸೆಯೊಳು ಬಿದ್ದು ಕಾಡಿಸುವದೆ ॥
ಲೇಸಾಗಿ ನಾಯಿಬಾಲಕೆ ನಾರಾಯಣ ತೈಲ ।
ಏಸು ಬಾರಿ ತೀಡಿದರೆ ನೀಟಾಗುವುದೇ ॥ 2 ॥
ಸಾಧು ಸಜ್ಜನರ ಸಂಗವ ಮಾಡಲೊಲ್ಲದೆ ।
ಬಾಧಿಸುತಿದೆ ದುಷ್ಟ ಸಂಗದಿಂದ ॥
ಮಾಧವ ಭಕ್ತವತ್ಸಲ ಹಯವದನನೆ ।
ನೀ ದಯಮಾಡಿ ನಿನ್ನಂತೆ ಮಾಡೆನ್ನ ಮನ ॥ 3 ॥
********