ರಾಗ: ಕಮಾಚ್ ತಾಳ: ಆದಿ
ಗುರುಪಾದವ ಸ್ಮರಿಸಿ ಪ
ಗುರುರಾಘವೇಂದ್ರರ ಭಜಿಸಿ ಅ. ಪ
ಗುರುಪಾದ ಸ್ಮರಿಸುತ್ತ
ಮರುತನ ಪ್ರೀತಿಗಳಿಸುತ್ತ
ತ್ವರಿತದಿ ಶ್ರೀಹರಿ ಕರುಣಕ್ಕೆ
ಪಾತ್ರರಾಗೀರೋ 1
ಗುರುಹಿರಿಮೆ ಅರಿತವರೆ
ಹರಿಯಕರುಣಕ್ಕೆ ಪಾತ್ರರು
ಗುರುಪಾದ ಸ್ಮರಣೆಯಿಂ
ಸುರಲೋಕ ಪೊಂದಿರೋ 2
ಮರುತಮತಸಾರುತ್ತ
ಸಿರಿಕೃಷ್ಣವೇದವ್ಯಾಸವಿಠಲನ
ಕರುಣಪಡೆದ ಗುರುರಾಜರ
ಚರಿತೆಪಾಡುತ ಪುನೀತರಾಗಿರೋ 3
***