ಹರಪನಹಳ್ಳಿ ಭೀಮವ್ವನವರು
ಗುರುವು ನಾರದರಿಂದ ಅನುಗ್ರಹ ಪಡೆದಿಹ ಹರದಿ ಭೀಮ
ವ್ವನ ನೆನೆಯೋಣ
ಪರಮ ಪಾವನಳು ಪರಮಾತ್ಮನ ಗುಣ ಪರಿ ಪರಿಯಲಿ ಹೊಗ
ಳಿದ||ಪಲ್ಲ||
ಸ್ತುತಿ ಮಣಿ ಮಾಲಿಕೆ, ಮುಯ್ಯದ ಹಾಡು ರತಿಕಲ್ಯಾಣ ಸುಭದ್ರ ಕಲ್ಯಾಣ
ಶಕುಂತಳನ ಹಾಡು ದಾನವ್ರತದ ಹಾಡು ನಳ ಚರಿತ್ರೆ 108
ನಾರಾಯಣ
ಸಂಕ್ಷೇಪ ರಾಮಾಯಣ ಜಲಕ್ರೀಡಿ ಪಾರಿಜಾತ ಉಧ್ಧವಗೀತ
ಸಮುದ್ರ ಮಥನದ ಹಾಡು ಸೀರೆ ಸೆಳೆದಹಾಡು ಶ್ರಿನಿವಾಸ
ಕಲ್ಯಾಣ ಮೊದಲಾದ||೧||
ತೀರ್ಥಯಾತ್ರೆಗೆ ಪೋಗಿ ಗಂಗಾಸ್ನಾನವ ಮಾಡಿ, ಸರಸ್ವತಿ ನದಿ
ಯನ್ನ ಧ್ಯಾನಿಸಲು
ಸರಸ್ವತಿ ನದಿಯು ಗುಪ್ತಗಾಮಿನಿ ಕೆಂಪು ಸೀರೆಯು ಹಾಸಿ
ದಂತೆ
ತರಂಗಗಳು ಬರಲು, ನಾವೆಗಳು ಹೋಗುತ್ತಿರಲು ಮತ್ತೆ
ಸ್ನೇಹಿತಳಾದ ಬೃಂದಾವನಿಗೆ ಕೂಡ ದರುಶನ ಕೋರಲು||೨||
ಪಾತ್ರರ ಸಂಗಡ ಯಾತ್ರೆ ಮಾಡಬೇಕೆನ್ನುತ ಜಗನ್ನಾಥದಾಸರು
ತಿಳಿಸಿ ದಂತೆ
ಭೀಮವ್ವನ ಜೊತೆ ಯಾತ್ರೆ ಮಾಡಿ ಬೃಂದಾವನಿಗೆ ಕೂಡ
ದರುಶನವಾಯಿತೆಂದು
ಶ್ರಧ್ಧೆಯಿಂದಲಿ ಬಂದು ಶುಧ್ಧಮನದಿ ಶುಧ್ಧಾತ:ಕ್ಕರಣದಿ
ಬೇಡಲು
ಮಧ್ವೇಶಕೃಷ್ಣನು ಒಲಿಯುವನು ನಮ್ಮನ ಉಧ್ಧಾರ ಮಾಡುವನು||೩||
*******