ರಾಗ ಮೋಹನ ಆದಿತಾಳ
ಕರುಣಾಬ್ಧಿ ನೀನಂತೆ , ಉಳಿಸಿಕೊಳ್ಳಯ್ಯ ಪೆಸರ
ಕರುಣದಿ ಎನ್ನ ಮಾತ ಲಾಲಿಸಯ್ಯ ||ಪ||
ಶರಣರ ಪೊರೆವ ಬಿರುದು ನಿನ್ನದಯ್ಯ
ಕರಪಿಡಿದೆನ್ಮನ ಹರಿಕೆಯ ನೀಡಯ್ಯ ||ಅ||
ನಾರಿಲಕುಮಿಪತಿ ದೇವ ನೀನುತ್ತಮ
ಮೀರುವರನ ನಿನ್ನ ಕಾಣೆನಯ್ಯ
ಕೋರಿದ ವರಗಳ ನೀಡುವ ದಾತನೆ
ಭಾರತೀಶ ವಾಯುಮತದಲಿ ಇರಿಸಯ್ಯ ||
ಐದೆರಡು ಮೇಲೆರಡು ಊರ್ಧ್ವಪುಂಡ್ರಗಳಯ್ಯ
ಐದು ಮುದ್ರಾಂಕಿತವು ಭೇದಗಳಯ್ದು
ಐದು ವಿಧಗಳಲಿ ತಾರತಮ್ಯಜ್ಞಾನ
ಐದು ಮೂರನೆ ಮೊಗು ಕೃಷ್ಣಯ್ಯ ನೀಡೆನಗೆ ||
ಹೊಳೆವ ಸುದರ್ಶನ ಎಡದಲಿ ಶಂಖವು
ಥಳಥಳಿಸುವ ದಿವ್ಯ ತುಳಸಿಯ ಹಾರ
ಸುಲಭದಿಂದಲಿ ಒಲಿವ ಚೆಲುವ ರಾಜಗೋಪಾಲ
ಕೊಳಲನೂದುವ ತಂದೆ ಪುರಂದರವಿಠಲಯ್ಯ ||
***
ಕರುಣಾಬ್ಧಿ ನೀನಂತೆ , ಉಳಿಸಿಕೊಳ್ಳಯ್ಯ ಪೆಸರ
ಕರುಣದಿ ಎನ್ನ ಮಾತ ಲಾಲಿಸಯ್ಯ ||ಪ||
ಶರಣರ ಪೊರೆವ ಬಿರುದು ನಿನ್ನದಯ್ಯ
ಕರಪಿಡಿದೆನ್ಮನ ಹರಿಕೆಯ ನೀಡಯ್ಯ ||ಅ||
ನಾರಿಲಕುಮಿಪತಿ ದೇವ ನೀನುತ್ತಮ
ಮೀರುವರನ ನಿನ್ನ ಕಾಣೆನಯ್ಯ
ಕೋರಿದ ವರಗಳ ನೀಡುವ ದಾತನೆ
ಭಾರತೀಶ ವಾಯುಮತದಲಿ ಇರಿಸಯ್ಯ ||
ಐದೆರಡು ಮೇಲೆರಡು ಊರ್ಧ್ವಪುಂಡ್ರಗಳಯ್ಯ
ಐದು ಮುದ್ರಾಂಕಿತವು ಭೇದಗಳಯ್ದು
ಐದು ವಿಧಗಳಲಿ ತಾರತಮ್ಯಜ್ಞಾನ
ಐದು ಮೂರನೆ ಮೊಗು ಕೃಷ್ಣಯ್ಯ ನೀಡೆನಗೆ ||
ಹೊಳೆವ ಸುದರ್ಶನ ಎಡದಲಿ ಶಂಖವು
ಥಳಥಳಿಸುವ ದಿವ್ಯ ತುಳಸಿಯ ಹಾರ
ಸುಲಭದಿಂದಲಿ ಒಲಿವ ಚೆಲುವ ರಾಜಗೋಪಾಲ
ಕೊಳಲನೂದುವ ತಂದೆ ಪುರಂದರವಿಠಲಯ್ಯ ||
***
pallavi
karuNAbdi nInante uLisikoLLayya pesara karuNadi enna mAta lAlisayya
anupallavi
sharaNara poreva birudu ninnadayya kara iDidenmana harikeya nIDayya
caraNam 1
nAri lakumipati dEva nInuttama mIruvaranu ninna kANenayya
kOrida varagaLa nIDuva dAtane bhAratIsha vAyu matadali irisayya
caraNam 2
aideraDu mEleraDu Urdhva puNDragaLayya aidu mudrAnkitavu bhEdagaLaidu
aidu vidhadali tAratamya jnAna aidu mUrane mogu krSNayya nInaDege
caraNam 3
hoLeva sudarshana eDadali sangavu thaLathaLisuva divya tulasiya hAra
sulabhadindali oliva celuva rAjagOpAla koLalananUduva tande purandara viTTalayya
***