Showing posts with label ನಿನ್ನ ನಂಬಿದೆ ನಾನು ಎನ್ನ ನೀ ಸಲುಹೋ varaha timmappa NINNA NAMBIDE NAANU ENNA NEE SALUHO. Show all posts
Showing posts with label ನಿನ್ನ ನಂಬಿದೆ ನಾನು ಎನ್ನ ನೀ ಸಲುಹೋ varaha timmappa NINNA NAMBIDE NAANU ENNA NEE SALUHO. Show all posts

Friday, 17 December 2021

ನಿನ್ನ ನಂಬಿದೆ ನಾನು ಎನ್ನ ನೀ ಸಲುಹೋ ankita varaha timmappa NINNA NAMBIDE NAANU ENNA NEE SALUHO



by ನೆಕ್ಕರ ಕೃಷ್ಣದಾಸರು

ನಿನ್ನ ನಂಬಿದೆ ನಾನು ಎನ್ನ ನೀ ಸಲುಹೋ
ಪನ್ನಗಾಶಯನ ಹರಿ ವೇಂಕಟರಮಣ ||ಪ||

ವರಧ್ರುವನ ಪೊರೆದಂತೆ ಪ್ರಹ್ಲಾದಗೊಲಿದಂತೆ
ಕರಿಯ ಸಲಹಿದಂತೆ ಕರುಣವಿರಲಂತೆ ||೧||

ತರಳೆ ದ್ರೌಪದಿಯ ಅಭಿಮಾನ ಕಾಯ್ದಂತೆ
ಧುರದೊಳು ನರನ ಶಿರವ ಉಳುಹಿದಂತೆ ||೨||

ಶೇಷಾದ್ರಿವಾಸ ಜಗದೀಶ ಲಕ್ಷ್ಮೀಶ
ಕ್ಲೇಶಪಾಶವಿನಾಶ ಜನಪೋಷ ವೇಂಕಟೇಶ ||೩||

ಪರಮ ಮಂಗಳಮೂರ್ತಿ ಪಾವನಕೀರ್ತಿ
ಧರೆಯ ರಕ್ಷಿಪ ಅರ್ತಿ ದಯವಾಗು ಪೂರ್ತಿ ||೪||

ಮಕರಕುಂಡಲ ಧರ ಮುಕುಟಕೇಯೂರ
ಸಕಲಾಭರಣಹಾರ ಸ್ವಾಮಿ ಉದಾರ ||೫||

ತಾಳಲಾರೆನು ನಾನು ಬಹಳ ದಾರಿದ್ರ್ಯ
ಕೇಳುವರಿಲ್ಲ ಬಹು ಭವಭಯ ಕ್ಷುದ್ರ ||೬||

ನೋಡಬೇಡೆನ್ನವಗುಣವ ದಮ್ಮಯ್ಯ
ಬೇಡಿದಿಷ್ಟವನಿತ್ತು ಒಡಗೂಡಿ ಸಲಹಯ್ಯ ||೭||

ಭಕ್ತಜನ ಸಂಸಾರಿ ಬಹುದುರಿತಹಾರಿ
ಮುಕ್ತಿದಾಯಕ ದಾರಿ ಮುಂದೆ ನೀ ತೋರಿ ||೮||

ವರಾಹ ತಿಮ್ಮಪ್ಪ ಒಲವಾಗೆನ್ನಪ್ಪ
ಸಾರಿದವರ ತಪ್ಪ ಸಲಹೋ ನೀನಪ್ಪ ||೯||
******


ರಾಗ ಮುಖಾರಿ ಆದಿತಾಳ (raga, taala may differ in audio)