Showing posts with label ಬೆಳಗೆ ಬೇಗ ಭ್ರಮರವೇಣಿ ನಳಿನನಾಭನಿಗಾರುತಿಯ shyamasundara. Show all posts
Showing posts with label ಬೆಳಗೆ ಬೇಗ ಭ್ರಮರವೇಣಿ ನಳಿನನಾಭನಿಗಾರುತಿಯ shyamasundara. Show all posts

Wednesday, 1 September 2021

ಬೆಳಗೆ ಬೇಗ ಭ್ರಮರವೇಣಿ ನಳಿನನಾಭನಿಗಾರುತಿಯ ankita shyamasundara

 ..

ಬೆಳಗೆ ಬೇಗ ಭ್ರಮರವೇಣಿ

ನಳಿನನಾಭನಿಗಾರುತಿಯ ಪ

ಬಾಲಧ್ರುವ ಪಾಂಚಾಲಿಯರ

ಪಾಲಿಸಿದ ಶ್ರೀಲೋಲನಾದ

ವಾಲಿ ಮದವ ಭಂಜಗೆ 1

ಇಂದು ಮುಖದ ಸುರೇಂದ್ರವರದ

ಕಂದುಗೊರಳ ಸಖ ನವನೀತ ಚೋರ

ನಂದಸುತ ಗೋವಿಂದಗೆ 2

ತಟಿತ ನಿಭ ವೆಂಕಟ ಗಿರೀಶ

ಚಟುಲ ಮೂರ್ತಿ ಶಾಮಸುಂದರ ವಿಠಲಗೆ 3

***