Showing posts with label ರಾಯರ ನೋಡಿರೈ ಶ್ರೀ ಗುರು ರಾಯರ ಪಾಡಿರೈ others. Show all posts
Showing posts with label ರಾಯರ ನೋಡಿರೈ ಶ್ರೀ ಗುರು ರಾಯರ ಪಾಡಿರೈ others. Show all posts

Friday, 27 December 2019

ರಾಯರ ನೋಡಿರೈ ಶ್ರೀ ಗುರು ರಾಯರ ಪಾಡಿರೈ others

ರಾಯರ ನೋಡಿರೈ ಶ್ರೀ ಗುರು ರಾಯರ ಪಾಡಿರೈ        || ಪ ||
ಶ್ರೀಯರಸನಪ್ರೀಯಾ-ಕಂಜಾಪ್ತಾಭಸು
ಕಾಯಾ – ಕವಿಜನಗೇಯಾ                               || ಅ ||
ಶ್ರೀಸುಧೀ೦ದ್ರಕರಕಮಲಸಂಭೂತಾ- ಬಹುವಿಖ್ಯಾತಾ
ಶ್ರೀಶನ ಗುಣಗಳ ತುತಿಸುವ ಯತಿಶಿರೋಮಣಿಯೋ- ಚಿಂತಾಮಣಿಯೋ
ಈ ಸುಜನರ ಮನಸಿಗೆ ತೋರುವಿದಹ್ಲಾದ- ಸಿರಿಪ್ರಹ್ಲಾದ                                                   || ೧ ||
ದಂಡಕಮಂಡಲ ಕಾಷಾಯವು ಸುವಸನ-ವೇದವ್ಯಾಸನಾ
ಪುಂಡರೀಕಪದಭಂಗಾ-ಮುನಿಕುಲೋತ್ತುಂಗ
ಮಂಡಲದೊಳು ಬಹು ತೋಂಡರ ಪರಿಪಾಲಕ-ವರಬಾಲ್ಹೀಕ                                               || ೨ ||
ತುಂಗಾತೀರದಿ ಮಂತ್ರಾಲಯದೊಳಗಿರುವೋ-ಕಲ್ಪತರುವೋ
ಗಂಗಾಜನಕ ವಿಹಂಗವಾಹನ ಇಲ್ಲಿಹನು-ನತಸುರಧೇನು
ಮಂಗಳಮಹಿಮರ ದರುಶನ ಮಾತ್ರ ಅಘನಾಶ-ಶ್ರೀಗುರುವ್ಯಾಸ                                                   || ೩ ||
ಪರಿಮಳ ವಿರಚಿಸಿ ಬುಧರಿಗೆ ಬೀರಿದ ಧೀರ-ಗುಣಗಂಭೀರ
ಪರಿಪರಿ ಚರಿತೆಯ ತೋರ್ದ ಭೂದೇವರ ದೇವ-ದೇವಸ್ವಭಾವ
ನರ ಇವರನು ಕ್ಷಣ ಬಿಡದಲೆ ಭಜಿಸಲು ಸುಖವು-ಅಘಪರಿಹರವು                                               || ೪ ||
ದುಷ್ಟಮತವ ಖಂಡಿಸಿ ಹರಿಪರನೆಂದೊರೆದಾ-ಅಭೀಷ್ಟೆಯ ಗರೆದಾ
ಸೃಷ್ಟಿಯೊಳಗೆ ಶ್ರೀಪ್ರಾಣೇಶವಿಠ್ಠಲನ ದಾಸ-ಮುನಿಕುಲೋತ್ತಂಸ
ಎಷ್ಟುಪೊಗಳಲಶಕ್ಯವು ಸದ್ಗುಣಸಾಂದ್ರ-ಶ್ರೀ ರಾಘವೇಂದ್ರ                                                || ೫ ||
************


ರಾಯರ ನೋಡಿರೈ – ಶ್ರೀ ಗುರು ರಾಯರ ಪಾಡಿರೈ        || ಪ ||
ಶ್ರೀಯರಸನಪ್ರೀಯಾ-ಕಂಜಾಪ್ತಾಭಸು
ಕಾಯಾ – ಕವಿಜನಗೇಯಾ                               || ಅ ||

ಶ್ರೀಸುಧೀ೦ದ್ರಕರಕಮಲಸಂಭೂತಾ- ಬಹುವಿಖ್ಯಾತಾ
ಶ್ರೀಶನ ಗುಣಗಳ ತುತಿಸುವ ಯತಿಶಿರೋಮಣಿಯೋ- ಚಿಂತಾಮಣಿಯೋ
ಈ ಸುಜನರ ಮನಸಿಗೆ ತೋರುವಿದಹ್ಲಾದ- ಸಿರಿಪ್ರಹ್ಲಾದ     || ೧ ||

ದಂಡಕಮಂಡಲ ಕಾಷಾಯವು ಸುವಸನ-ವೇದವ್ಯಾಸನಾ
ಪುಂಡರೀಕಪದಭಂಗಾ-ಮುನಿಕುಲೋತ್ತುಂಗ
ಮಂಡಲದೊಳು ಬಹು ತೋಂಡರ ಪರಿಪಾಲಕ-ವರಬಾಲ್ಹೀಕ     || ೨ ||

ತುಂಗಾತೀರದಿ ಮಂತ್ರಾಲಯದೊಳಗಿರುವೋ-ಕಲ್ಪತರುವೋ
ಗಂಗಾಜನಕ ವಿಹಂಗವಾಹನ ಇಲ್ಲಿಹನು-ನತಸುರಧೇನು
ಮಂಗಳಮಹಿಮರ ದರುಶನ ಮಾತ್ರ ಅಘನಾಶ-ಶ್ರೀಗುರುವ್ಯಾಸ   || ೩ ||
********