Showing posts with label ಬಾರೋ ಮನ್ಮನ ಮಂದಿರಕೆ ಶ್ರೀರಾಘವೇಂದ್ರ kamalesha. Show all posts
Showing posts with label ಬಾರೋ ಮನ್ಮನ ಮಂದಿರಕೆ ಶ್ರೀರಾಘವೇಂದ್ರ kamalesha. Show all posts

Wednesday, 1 September 2021

ಬಾರೋ ಮನ್ಮನ ಮಂದಿರಕೆ ಶ್ರೀರಾಘವೇಂದ್ರ ankita kamalesha

 ರಾಗ: ಕಮಾಚ್ ತಾಳ: ಆದಿ

ಬಾರೋ ಮನ್ಮನ ಮಂದಿರಕೆ

ಶ್ರೀರಾಘವೇಂದ್ರ ಸದ್ಗುಣಸಾಂದ್ರನೆ ಬೇಗ

ಶರಣಾಗತ ನಾನು ಭಕ್ತವತ್ಸಲ ನೀನು

ಸುರತರುವಂದದಿ ಕಾಮಿತವೀಯಲು ಅ.ಪ

ಕುಂದರದನ ದರಹಾಸಲಸಿತ ದಯಾ-

ಚಂದ್ರಿಕೆ ಬೀರುತ ಯತಿಚಂದ್ರಮನೆ 1

ಭಾಸುರಚರಿತನೆ ದಾಸನಮೊರೆ ಕೇಳಿ

ದೋಷಗಳೆಣಸದೆ ಪೋಷಿಸಲೆನ್ನನು 2

ಸುಲಭದ ಭಕುತಿಗೆ ಒಲಿಯುವ ಪ್ರಭುವೆಂಬ

ಸೊಲ್ಲ ಸತ್ಯಮಾಡಲೆಂದು ನಿಲ್ಲದೆ ಬೇಗ 3

ಷೋಡಶವಿಧ ಉಪಚಾರಗಳರ್ಪಿಸಿ

ಹಾಡಿ ನಲಿದು ಭಕ್ತಿಯಿಂದ ಪೂಜಿಪೆ ನಿನ್ನ 4

ಮನಸಿಜಪಿತ ಕಮಲೇಶ ಪದಾರ್ಚಕ

ಅನಂತ ಮಹಿಮ ನಿನ್ನ ಸೇವಕ ನಾನೆಂದು 5

****

ಈ ಕೀರ್ತನೆ kamalesha vittala ದಾಸರ ರಚನೆಯೆಂದು ಖಚಿತವಾಗಿ ತಿಳಿದಿಲ್ಲ; or by Kamalesharu (no vittala) ಆದರೂ ಪ್ರಸಿದ್ಧವಾಗಿದೆ.