ರಾಗ: ಕಮಾಚ್ ತಾಳ: ಆದಿ
ಬಾರೋ ಮನ್ಮನ ಮಂದಿರಕೆ
ಶ್ರೀರಾಘವೇಂದ್ರ ಸದ್ಗುಣಸಾಂದ್ರನೆ ಬೇಗ ಪ
ಶರಣಾಗತ ನಾನು ಭಕ್ತವತ್ಸಲ ನೀನು
ಸುರತರುವಂದದಿ ಕಾಮಿತವೀಯಲು ಅ.ಪ
ಕುಂದರದನ ದರಹಾಸಲಸಿತ ದಯಾ-
ಚಂದ್ರಿಕೆ ಬೀರುತ ಯತಿಚಂದ್ರಮನೆ 1
ಭಾಸುರಚರಿತನೆ ದಾಸನಮೊರೆ ಕೇಳಿ
ದೋಷಗಳೆಣಸದೆ ಪೋಷಿಸಲೆನ್ನನು 2
ಸುಲಭದ ಭಕುತಿಗೆ ಒಲಿಯುವ ಪ್ರಭುವೆಂಬ
ಸೊಲ್ಲ ಸತ್ಯಮಾಡಲೆಂದು ನಿಲ್ಲದೆ ಬೇಗ 3
ಷೋಡಶವಿಧ ಉಪಚಾರಗಳರ್ಪಿಸಿ
ಹಾಡಿ ನಲಿದು ಭಕ್ತಿಯಿಂದ ಪೂಜಿಪೆ ನಿನ್ನ 4
ಮನಸಿಜಪಿತ ಕಮಲೇಶ ಪದಾರ್ಚಕ
ಅನಂತ ಮಹಿಮ ನಿನ್ನ ಸೇವಕ ನಾನೆಂದು 5
****
ಈ ಕೀರ್ತನೆ kamalesha vittala ದಾಸರ ರಚನೆಯೆಂದು ಖಚಿತವಾಗಿ ತಿಳಿದಿಲ್ಲ; or by Kamalesharu (no vittala) ಆದರೂ ಪ್ರಸಿದ್ಧವಾಗಿದೆ.
No comments:
Post a Comment