Showing posts with label ಬಾ ಬಾರೋ ಬಾಲಕೃಷ್ಣ ಬಾರೆಂದು ಕರೆವೆ others BAA BAARO BALAKRISHNA BAARENDU KAREVE. Show all posts
Showing posts with label ಬಾ ಬಾರೋ ಬಾಲಕೃಷ್ಣ ಬಾರೆಂದು ಕರೆವೆ others BAA BAARO BALAKRISHNA BAARENDU KAREVE. Show all posts

Tuesday, 27 April 2021

ಬಾ ಬಾರೋ ಬಾಲಕೃಷ್ಣ ಬಾರೆಂದು ಕರೆವೆ ankita others BAA BAARO BALAKRISHNA BAARENDU KAREVE

 ಬಾ ಬಾರೋ ಬಾಲಕೃಷ್ಣ ಬಾರೆಂದು ಕರೆವೆ ನಿನ್ನಾ 

ಬಾ ಬಾರೋ ಬಾಲಕೃಷ್ಣ।।

ಗೊಲ್ಲಾರ ಮನೆಯ ಪೊಕ್ಕು ಚಲ್ಲಿದ ಬೆಣ್ಣೆ ಮೊಸರ ।

ಕಳ್ಳತನವ ಮಾಡಿದಾ ಬಾರಯ್ಯ ಚೋರ ಕೃಷ್ಣ ।।

ನಾರೀಯರೆಲ್ಲ ಸೇರಿ ನೀರಾಟವಾಡುತಿರಲು ।

ಸೀರೆಗಳನ್ನೆ ಕದ್ದು ಮರವನ್ನೆ ಏರಿದ ಕೃಷ್ಣ ।।

ಕಾಳಿಯ ಮಾಡುವ ಧುಮುಕಿ ಕಾಲಲ್ಲಿ ನೀರ ಕಲಕಿ ।ಕಾಳಿಂಗನ್ಹೆಡೆಯ ತುಳಿದಾ ಕಾಳಿಂಗಮಥನ ಕೃಷ್ಣ ।।

ನಂದಾನಕಂದ ಬಾರೋ ನವನೀತ ಚೋರ ಬಾರೋ ।

ಆನಂದ ಕಂದ ಬಾರೋ ಉಡುಪಿಯ ಕೃಷ್ಣ ಬಾರೋ ।।

***