Showing posts with label ನೋಡುವ ಬನ್ನಿರೆಲ್ಲರು ಲೋಕ ನಾಯಕ varaha timmappa. Show all posts
Showing posts with label ನೋಡುವ ಬನ್ನಿರೆಲ್ಲರು ಲೋಕ ನಾಯಕ varaha timmappa. Show all posts

Friday, 27 December 2019

ನೋಡುವ ಬನ್ನಿರೆಲ್ಲರು ಲೋಕ ನಾಯಕ ankita varaha timmappa

by ನೆಕ್ಕರ ಕೃಷ್ಣದಾಸರು
ಶಂಕರಾಬಹರಣ ರಾಗ ತ್ರಿವಿಡೆ ತಾಳ

ನೋಡುವ ಬನ್ನಿರೆಲ್ಲರು ಲೋಕ ನಾಯಕ ಚೆಲ್ವ-
ಮೂಡಲ ಗಿರಿವಾಸ ಶ್ರೀವೇಂಕಟೇಶನ ||ಪ||

ಭೂಮಿಗೆ ವೈಕುಂಠವೆಂದು ತೋರುತ ನಿಂತ
ಸ್ವಾಮಿ ಪುಷ್ಕರಿಣಿಯ ತೀರದೊಳು
ಪ್ರೇಮದಿ ಭಕ್ತರ ಸಲಹಿಕೊಂಬುವನಂತೆ
ಕಾಮಿತಾರ್ಥವನಿತ್ತು ಕಳುಹುವನಂತೆ ||೧||

ಬ್ರಹ್ಮಾದಿಸುರರಿಂದ ಪೂಜಿಸಿಕೊಂಬನಂತೆ
ನಿರ್ಮಲರೂಪದಿ ತೋರ್ಪನಂತೆ
ಕರ್ಮಬಂಧಗಳನ್ನು ಕಡಿದು ಕೊಡುವನಂತೆ
ಹೆಮ್ಮೆಯ ಪತಿಯೆಂದು ತೋರ್ಪನಂತೆ ||೨||

ಆಡಿ ತಪ್ಪುವರಿಗೆ ಕೇಡ ಬಗೆವನಂತೆ
ನೋಡಿಯೆ ನಡೆಯಲು ಕೊಡುವನಂತೆ
ಮೂಡಿದ ಆದಿತ್ಯ ಶತಕೋಟಿತೇಜನಂತೆ
ರೂಢಿಗೊಡೆಯ ನಮ್ಮ ವರಾಹತಿಮ್ಮಪ್ಪನಂತೆ ||೩||
******