ಕರವೀರಪುರವ ಸೇರಿದಳು ಹದಿನಾರು ಸಾವಿರ ನಾರಿಯರ ಭಾಗ್ಯವ ನೋಡಿ ಸೇರಿದಳುಲಕುಮಿ ಜರಿದಾಳು ಪ.
ಶ್ರೀವೈಕುಂಠಕ್ಕೆ ಸರಿಯೆಂದು ದ್ವಾರಕೆಹರಿ ಬ್ರಹ್ಮ ಕೇಳಿ ಹರುಷಾಗಿಹರಿ ಬ್ರಹ್ಮ ಕೇಳಿ ಹರುಷಾಗಿ ತಮ್ಮ ತಮ್ಮಪುರದಿಂದ ಇಳಿದು ಬರುತಾರೆ 1
ವೃಂದಾರಕರೆಲ್ಲ ಬಂದರು ದ್ವಾರಕೆಗೆ ಚಂದ್ರ ನೊಬ್ಬ ಬರಲಿಲ್ಲಚಂದ್ರ ತಾನೊಬ್ಬ ಬರಲಿಲ್ಲ ತನ್ನಕಾಂತಿ ಕುಂದೀತೆಂಬೊ ಭಯದಿಂದ2
ಸಾರು ದೇವತೆಗಳು ದ್ವಾರಕೆಗೆ ಬರಲುಸೂರ್ಯ ತಾನೊಬ್ಬ ಬರಲಿಲ್ಲಸೂರ್ಯ ತಾನೊಬ್ಬ ಬರಲಿಲ್ಲ ತನ್ನತೇಜ ಕುಂದೀತೆಂಬೊ ಭಯದಿಂದ 3
ಜಾಣ ನಾರದ ತಮ್ಮ ವೀಣೆ ನುಡಿಸುತ ವಾಣಿ ಮಾವನ ಸ್ತುತಿಸುತವಾಣಿ ಮಾವನ ಸ್ತುತಿಸುತ ತಾಒಂದು ಓಣಿಯ ಹಿಡಿದು ಬರುತಾನೆ4
ವಶಿಷ್ಠ ಮೊದಲಾದ ಮಹಾಶಿಷ್ಠರು ಮುನಿಗಳು ತಮ್ಮ ಕೃಷ್ಣ್ಣಾಜಿನ ಕಾಷ್ಠ ಸಹಿತಾಗಿಕೃಷ್ಣ್ಣಾಜಿನ ಕಾಷ್ಠ ಸಹಿತಾಗಿ ಬಂದರು ಧಿಟ್ಟ ರಾಮೇಶÀನರಮನೆಗೆ 5
****