Showing posts with label ಗುರುಜಗನ್ನಾಥಾರ್ಯ ಕರುಣಿಸಯ್ಯ ಮೊರೆ ಹೊಕ್ಕೆ ತ್ವತ್ವದಕೆ ಮರೆಯದಲೆ ಪಿಡಿಕೈಯ್ಯ shyamasundara. Show all posts
Showing posts with label ಗುರುಜಗನ್ನಾಥಾರ್ಯ ಕರುಣಿಸಯ್ಯ ಮೊರೆ ಹೊಕ್ಕೆ ತ್ವತ್ವದಕೆ ಮರೆಯದಲೆ ಪಿಡಿಕೈಯ್ಯ shyamasundara. Show all posts

Wednesday, 1 September 2021

ಗುರುಜಗನ್ನಾಥಾರ್ಯ ಕರುಣಿಸಯ್ಯ ಮೊರೆ ಹೊಕ್ಕೆ ತ್ವತ್ವದಕೆ ಮರೆಯದಲೆ ಪಿಡಿಕೈಯ್ಯ ankita shyamasundara

 ..

ಗುರುಜಗನ್ನಾಥಾರ್ಯ ಕರುಣಿಸಯ್ಯ

ಮೊರೆ ಹೊಕ್ಕೆ ತ್ವತ್ವದಕೆ ಮರೆಯದಲೆ ಪಿಡಿಕೈಯ್ಯ ||


ಪ್ರಹ್ಲಾದನನುಗ್ರಹವು ಎಲ್ಲ ಕಾಲದಲಿ ನಿ

ನ್ನಲ್ಲಿ ಸುಂಪೂರ್ಣವಾಗಿರುವದೆಂಬಾ

ಸೊಲ್ಲು ಲಾಲಿಸಿ ನಿನ್ನ ಪಲ್ಲವಾಂಘ್ರಿಗೆ ನಮಿಪೆ

ಬಲ್ಲಿದನೆ ಹರಿಧ್ಯಾನದಲ್ಲಿ ನಿಲ್ಲಿಸು ಮನವ 1


ಕನಕಾಗ್ರ ಜಾತಾರ್ಯನೆನಿಸಿ ಜನಿಸುತ ಮಂತ್ರ

ಮುನಿ ನಿಲಯ ಮುನಿವರ್ಯ ಶ್ರೀರಾಯಾರಾ

ಗುಣಸ್ತವನ ವಿರಚಿಸುತ ಪ್ರಣತರಿಗೆ ಪಠಿಸುತ್ತ

ಮನದಿಚ್ಛೆ ಪಡೆವದಕ್ಕೆ ಅನುಕೂಲಿಸಿದ ಜ್ಞಾನಿ 2


ಶ್ರೀ ಶಾಮಸುಂದರ ದಾಸವರ್ಯರ ಉಪ

ದೇಶವನು ಕೊಂಡ ಉಪವಾಸನೆಯನು

ಲೇಸಾಗಿ ಬಿಡಿದೆ ಪ್ರತಿವಾಸರದಿ ಗೈವಂಥ

ಭೂಸುರಾಗ್ರಣಿಯಾದ ಕೋಸಿಗೆಯ ದಾಸಾ 3

***