Showing posts with label ನಂದನ ಕಂದ ಗೋವಿಂದ ಮುಕುಂದ prasannavenkata. Show all posts
Showing posts with label ನಂದನ ಕಂದ ಗೋವಿಂದ ಮುಕುಂದ prasannavenkata. Show all posts

Tuesday, 12 November 2019

ನಂದನ ಕಂದ ಗೋವಿಂದ ಮುಕುಂದ ankita prasannavenkata

by ಪ್ರಸನ್ನವೆಂಕಟದಾಸರು
ನಂದನ ಕಂದ ಗೋವಿಂದ ಮುಕುಂದ ಇಂದಿರಜವಂದಿತ ಇಂದುಕುಲೇಂದ್ರ ಪ.

ಗೋರಸಚೋರ ಗೋಪೀರಮಣ ಧೀರಗೋರಜಪೂರಿತಚಾರುಅಲಂಕಾರಗೋರಕ್ಷ ಕ್ರೂರಸಂಹಾರ ಉದಾರವೀರ ಸುಯಮುನಾತೀರ ವಿಹಾರ 1

ಶೇಷಶೀರ್ಷನೃತ್ಯ ಹಾಸ ವಿಲಾಸವಾಸವಮದನಾಶ ವ್ರಜಪೋಷ ನಿರಾಶರಾಸಕ್ರೀಡಾಸುಖಾಧೀಶ ರಮೇಶದಾಸಾಕ್ರೂರಾಶ್ರಯ ಕಂಸವಿನಾಶ 2

ಪುಣ್ಯಗುಣಾನ್ವಿತ ಸುವರ್ಣವೇಣುಗಾಯನ್ನಚಿನ್ಮಯಪನ್ನಗನಾಗನಿಲಯ ಪೂರ್ಣಮನ್ನಿಸು ನಿನ್ನ ಭೃತ್ಯನ್ನ ಪ್ರಸನ್ವೆಂಕಟ ಧನ್ಯ ಇವ ನನ್ನವನೆನ್ನೆ 3
********