Showing posts with label ಮಲಗಿ ಎದ್ದನು ಕಾಣೆ ಮಕ್ಕಳ ಮಾಣಿಕ ರಂಗ purandara vittala. Show all posts
Showing posts with label ಮಲಗಿ ಎದ್ದನು ಕಾಣೆ ಮಕ್ಕಳ ಮಾಣಿಕ ರಂಗ purandara vittala. Show all posts

Thursday, 5 December 2019

ಮಲಗಿ ಎದ್ದನು ಕಾಣೆ ಮಕ್ಕಳ ಮಾಣಿಕ ರಂಗ purandara vittala

ರಾಗ ಸೌರಾಷ್ಟ್ರ ಆದಿ ತಾಳ 

ಮಲಗಿ ಎದ್ದನು ಕಾಣೆ ಮಕ್ಕಳ ಮಾಣಿಕ ರಂಗ, ಎದ್ದ ಕಾಣೆ ಅಮ್ಮ
ಛಲಹೋರಿ ಅಳುತಾನೆ ಮೊಲೆ ಕೊಡೆ ರಂಗಗೆ, ಎದ್ದ ಕಾಣೆ ||ಪ ||

ಧರೆಯೊಳು ತಮನ ಮರ್ದಿಸಲೆಂದು ಮತ್ಸ್ಯನಾ, ಗೆದ್ದ ಕಾಣೆ
ಭರದಿ ಮಂದರ ಪೊತ್ತು ಇಳೆಯೊಳು ಕೂರ್ಮನಾ, ಗೆದ್ದ ಕಾಣೆ
ಧರೆಯ ಕದ್ದಸುರನ್ನ ಕೊಲಲೆಂದು ವರಹನಾ, ಗೆದ್ದ ಕಾಣೆ
ತರಳ ಕರೆಯೆ ಕಂಭದಿಂದ ನರಸಿಂಹನಾ, ಗೆದ್ದ ಕಾಣೆ ||

ಚಿಕ್ಕ ವೇಷದಲಿ ದಾನವ ಬೇಡಿ ವಾಮನಾ, ಗೆದ್ದ ಕಾಣೆ
ಉಕ್ಕಿನ ಕೊಡಲಿಯ ಪಿಡಿದು ಪರಶುರಾಮ, ಎದ್ದ ಕಾಣೆ
ರಕ್ಕಸ ರಾವಣನ ಕೊಲಲೆಂದು ಶ್ರೀ ರಾಮ, ಎದ್ದ ಕಾಣೆ
ಸೊಕ್ಕಿದ ಕಂಸನ್ನ ವಧೆ ಮಾಡೆ ಶ್ರೀ ಕೃಷ್ಣ, ಎದ್ದ ಕಾಣೆ ||

ಪುರದ ಸತಿಯರ ವ್ರತವನಳಿದ ಬುದ್ಧನೆದ್ದ ಕಾಣೆ
ಹರುಷದಿ ತುರಗವನೇರಿದ ಕಲ್ಕ್ಯ ತಾನೆದ್ದ ಕಾಣೆ
ಶರಣಾಗತರನ್ನು ಪಾಲಿಪ ಶ್ರೀಹರಿಯೆದ್ದ ಕಾಣೆ ನಮ್ಮ
ವರದ ಪುರಂದರವಿಠಲ ಕೋಟಿಸೂರ್ಯನೆದ್ದ ಕಾಣೆ ||
***


Malagi eddanu ranga, makkala manika krushna |
Chala hididanu node molekode krushnage ||pa||

Jaladolu tamana mardisi andu matsyanagi |
Balugiriya negahi maremadi kurmanagi ||
Nelana oydavana koluvenemdu varahanagi |
Balubaktigagi kambadi narasimhanagi ||1||

Cikka rupadinda baliya danava bedi |
Ukkina kodaliya pidida parasurama ||
Mikkida taleya chendadida srirama |
Sokkida kamsana koluvenemda krushna ||2||

Balu pativrateyara vratavanalidabuddha|
Kaliyagi kadaguva pididu kudure Eri ||
Olidu Baktaranella salahuvenemtemdu |
Cheluva purandaravithala tottilolu ||3||
***

pallavi

malagi eddanu kANe makkaLa mANika ranga edda kANe amma chalahOri aLutAne mole koDe rangage edda kANe

caraNam 1

dhareyoLu damana mardisalendu matsyanA gedda kANe
bharadi mandara pottu iLeyoLu kUrmanA gedda kANe
dhareya kaddasuranna kolalendu varahanA gedda kANe
taraLa kareya kambhadinda narasimahnA gedda kANe

caraNam 2

cikka vESadali dAnava bEDi vAmanA gedda kANe
ukkina koDaliya piDidu parashurAma edda kANe
rakkasa rAvaNa kolalendu shrI rAma edda kANe
sokkida kamsanna vadhe mADe shrI krSNa edda kANe

caraNam 3

purada satiyara vrtavanaLida buddha netta kANe
haruSadi turagavanErida kalkya tAnetta kANe
shanraNAgatarannu pAlipa shrIhari yetta kANe namma
varada purandara viTTala kOTisUrya netta kANe
***

ಮಲಗಿ ಎದ್ದನು ರಂಗ, ಮಕ್ಕಳ ಮಾಣಿಕ ಕೃಷ್ಣ |
ಛಲ ಹಿಡಿದನು ನೋಡೆ ಮೊಲೆಕೊಡೆ ಕೃಷ್ಣಗೆ ||

ಜಲದೊಳು ತಮನ ಮರ್ದಿಸಿ ಅಂದು ಮತ್ಸ್ಯನಾಗಿ |
ಬಲುಗಿರಿಯ ನೆಗಹಿ ಮರೆಮಾಡಿ ಕೂರ್ಮನಾಗಿ ||
ನೆಲನ ಒಯ್ದವನ ಕೊಲುವೆನೆಂದು ವರಹನಾಗಿ |
ಬಲುಭಕ್ತಿಗಾಗಿ ಕಂಬದಿ ನಾರಸಿಂಹನಾಗಿ||

ಚಿಕ್ಕ ರೂಪದಿಂದ ಬಲಿಯ ದಾನವ ಬೇಡಿ |
ಉಕ್ಕಿನ ಕೊಡಲಿಯ ಪಿಡಿದ ಪರಶುರಾಮ ||
ಮಿಕ್ಕಿದ ತಲೆಯ ಚೆಂಡಾಡಿದ ಶ್ರೀರಾಮ |
ಸೊಕ್ಕಿದ ಕಂಸನ ಕೊಲುವೆನೆಂದ ಕೃಷ್ಣ ||

ಬಲು ಪತಿವ್ರತೆಯರ ವ್ರತವನಳಿದಬುದ್ಧ|
ಕಲಿಯಾಗಿ ಖಡಗುವ ಪಿಡಿದು ಕುದುರೆ ಏರಿ ||
ಒಲಿದು ಭಕ್ತರನೆಲ್ಲ ಸಲಹುವೆನೆಂತೆಂದು |
ಚೆಲುವ ಪುರಂದರವಿಠಲ ತೊಟ್ಟಿಲೊಳು ||
********