Showing posts with label ಶರಣು ಶರಣ್ಯರ ಸುರತರುವೆ ನಿನ್ನಚರಣ prasannavenkata. Show all posts
Showing posts with label ಶರಣು ಶರಣ್ಯರ ಸುರತರುವೆ ನಿನ್ನಚರಣ prasannavenkata. Show all posts

Sunday, 17 November 2019

ಶರಣು ಶರಣ್ಯರ ಸುರತರುವೆ ನಿನ್ನಚರಣ ankita prasannavenkata

by ಪ್ರಸನ್ನವೆಂಕಟದಾಸರು
ಶರಣು ಶರಣ್ಯರ ಸುರತರುವೆ ನಿನ್ನಚರಣಶರಣರಿಗೆ ಭಯವಿಲ್ಲ ಪ.

ದ್ರುಪದಾತ್ಮಜೆಯನಸುರ ಪಿಡಿದೆಳೆ ತಂದಪಮಾನಕಾಗಿ ಉಡುಗೆ ಸೆಳೆಯೆಅಪುಶಯನ ಮುಕುಂದ ಅಪಹಾಸವಾಯಿತೆಲಪರಮಪೀತಾಂಬರ ಒದಗಿತಂದು ದೇವಾ 1

ಮದದೊಳಂತ್ಯಜ ತರುಣಿಗೆ ಸೋತುಪರಮಾಧಮಜಾಮಿಳ ತನ್ನಂತ್ಯಕಾಲದಿಮುದದಿ ಕಡೆಯ ಸುತನ ನಾರಗ ಬಾರೆಂದೊದರಲು ಪೊರೆದೆ ದಾಸನ ಮರಳಿ 2

ವಿಗಡಮುನಿಶಾಪಕೆಇಂದ್ರದ್ಯುಮ್ನಮದನಾಗನಾಗಿ ನೆಗಳ ಬಾಯಿಗೆ ಸಿಲುಕೆಅಘಹರ ಸಲಹೆಂದರೆ ವಾಮಕರದಿಂದನೆಗಹಿದೆ ಪ್ರಸನ್ನ ವೆಂಕಟರನ್ನ 3
********