Showing posts with label ಏನೆಂದ್ಹೇಳಲಿ ಸ್ವಾನಂದ ಘನ ಸುಖವು mahipati. Show all posts
Showing posts with label ಏನೆಂದ್ಹೇಳಲಿ ಸ್ವಾನಂದ ಘನ ಸುಖವು mahipati. Show all posts

Wednesday, 1 September 2021

ಏನೆಂದ್ಹೇಳಲಿ ಸ್ವಾನಂದ ಘನ ಸುಖವು ankita mahipati

 ಏನೆಂದ್ಹೇಳಲಿ ಸ್ವಾನಂದ ಘನ ಸುಖವು p


ಮಾತಿನಂತಲ್ಲ ಜ್ಯೋತಿರ್ಮಯದ ಸುಖ ನೇತಿ ನೆÉೀತಿವೆಂಬುದು ಶ್ರುತಿವಚನ 1 

ಹೋಲಿಕೆಯ ಮಾತಿಗಿದು ಕೇಳು ಸಿಲುಕುವುದಿಲ್ಲ ಮೂಲ ತಿಳಿದವನೆ ಬಲ್ಲ ಮ್ಯಾಲೆ ಮಂದಿರದ 2 

ಅಂಜನೆ ಇಟ್ಟ ಗುರು ಕೃಪೆಯಿಂದ ನಿಜ ಗುರುತು ಕಂಡವನೆ ಬಲ್ಲ ಹರಿಮಹಿಮೆಯ 3 

ಸ್ವಾನುಭವದ ಸುಖಜ್ಞಾನಿಗಳಿಗಲ್ಲದೆ ನೀನು ನಾನೆಂಬವರಿಗೆ ಖೂನ ತಿಳಿಯದು 4 

ಮನಕರಿಗಿ ಮಹಿಪತಿ ಘನ ಬೆರೆದ ಗುರುತ ಏನೋ ಎಂತೋ ತಿಳಿ ಮಾತ ಆನಂದಭರಿತ 5

***