Showing posts with label ಹಿಂದಿಲ್ಲಾ ಇನ್ನು ಮುಂದಿಲ್ಲಾ govinda. Show all posts
Showing posts with label ಹಿಂದಿಲ್ಲಾ ಇನ್ನು ಮುಂದಿಲ್ಲಾ govinda. Show all posts

Tuesday, 19 November 2019

ಹಿಂದಿಲ್ಲಾ ಇನ್ನು ಮುಂದಿಲ್ಲಾ ankita govinda

by ಗೋವಿಂದದಾಸ
ಹಿಂದಿಲ್ಲಾ ಇನ್ನು ಮುಂದಿಲ್ಲಾ |ಹಿಂದಿಲ್ಲಾ ಮುಂದಿಲ್ಲಾ | ಒಂದಿನ ಸುಖವಿಲ್ಲಾ ಪ 
ನಂದ ಗೋಪನ ಮುದ್ದು | ಕಂದ ನೀನಲ್ಲದೆ ಅ.ಪ

ಉಡುವರಿವೆ ಇಲ್ಲಾ ಉಂಬರನ್ನವು ಇಲ್ಲ |ನಡೆವರೆ ಮುಂದೆ ದಾರಿಯು ಕಾಣೆನಲ್ಲ ||ಪೊಡವಿ ಪಾಲಕ ಶ್ರೀಕೃಷ್ಣ ನೀನಲ್ಲದೇ |ಬಡವನ ಬಾರೆಂದು ಕರೆದು ಮನ್ನಿಪರಿಲ್ಲ1

ಕಾಸು ಕೈಯೊಳಗಿಲ್ಲ | ಆಸೆ ದೇಹದೊಳಿಲ್ಲ ||ದೇಶ ದೇಶವ ಸುತ್ತಿ ಬಳಲಿದೆನಲ್ಲಾ ||ಭಾಸುರಾಂಗನೆ ಶ್ರೀನಿವಾಸ ನೀನಲ್ಲದೇ |ಲೇಸನೆಣಿಸುವರ ಕಾಣೆ ರುಕ್ಮಿಣಿನಲ್ಲ2

ಸತಿಸುತರೆನಗಿಲ್ಲ |ಗತಿಮುಂದೆ ಶಿವ ಬಲ್ಲ ||ಹಿತದಿಂದಲಿರಲೊಂದು ಮನೆ ತನಗಿಲ್ಲ ||ಪೃಥವಿ ಪಾಲಕ ಸೀತಾರಾಮ ನೀನಲ್ಲದೇ |ಹಿತವ ಬಯಸುವರ ಕಾಣೆ ಜಗದ ನಲ್ಲ3

ತಂದೆ ತಾಯಿಗಳಿಲ್ಲ | ಬಂಧು ಬಳಗವಿಲ್ಲ |ಒಂದು ವಿದ್ಯವ ನಾನು | ಕಲಿತವನಲ್ಲಾ ||ಇಂದಿರೆಯರಸ ಗೋವಿಂದ ನೀನಲ್ಲದೇ |ಬಂದ ಭಾಗ್ಯಗಳೊಂದು ನಿಜವಾದುದಲ್ಲಾ4
*******