Showing posts with label ಹೇಳ ಬಂದೇವಮ್ಮಾ ಗೋಪಿ ನಿನಗೆ ದೂರ ಯಾರ ಮಾತ shreeda vittala HELABANDEVAMMA GOPI NINAGE DOORA YAARA MAATA. Show all posts
Showing posts with label ಹೇಳ ಬಂದೇವಮ್ಮಾ ಗೋಪಿ ನಿನಗೆ ದೂರ ಯಾರ ಮಾತ shreeda vittala HELABANDEVAMMA GOPI NINAGE DOORA YAARA MAATA. Show all posts

Monday, 6 September 2021

ಹೇಳ ಬಂದೇವಮ್ಮಾ ಗೋಪಿ ನಿನಗೆ ದೂರ ಯಾರ ಮಾತ ankita shreeda vittala HELABANDEVAMMA GOPI NINAGE DOORA YAARA MAATA

 ..

kruti by Srida Vittala Dasaru  Karjagi Dasappa


ಹೇಳ ಬಂದೇವಮ್ಮಾ ಗೋಪಿ ನಿನಗೆ ದೂರ

ಯಾರ ಮಾತ ಕೇಳವಲ್ಲಾ ರಂಗ ಚೋರ ಪ


ದಿಕ್ಕಡದಿಮ್ಮಿಲೆ ಕೂಡಿಸುವ ಬ್ರಹ್ಮಾಂಡ ನೂರಾ

ಇವನ ಮಹಿಮಾ ತಿಳಿಯದವ್ವಾ ಮಾಯಕಾರ ಅ.ಪ.


ಕಳ್ಳನಾಗಿ ಕಂಣಮುಚ್ಚಿ ಗತಿಯವಲ್ಲನೆ

ವಳ್ಳೇಹೊತ್ತು ಬಂದಿತೆಂದು ಭಾರ ನೆಗಿವ್ಯಾನೆ 1


ಕ್ವಾರಿಲೆ ಹಾದು ದೈತ್ಯನ ಕೊಂದಾನೆ

ತರಳಗಾಗಿ ಖಂಬದಿಂದ ವಡದು ಬಂದಾನೆ 2


ಧಾರೂಣಿ ಅಳೆದು ಮೂರಡಿ ಮಾಡಿದ

ಅಂಬೆಯ ಮಗನಾಗಿ ಎಂಥ ಕಾಡಿದ 3


ರಂಭೆಗಾಗಿ ರಾವಣಗೇ ಅಂಬು ಹೂಡಿದ

ನಂಬೀದ ವಿಭೀಷಣಗೆ ಪಟ್ಟಗಟ್ಟಿದ 4


ಗೋಕುಲದೊಳಗೆ ಪುಟ್ಟಿ ಬೆಣ್ಣೆ ಮೆದ್ದಾನೆ

ವಸ್ತ್ರವಿಲ್ಲದಂತೆ ತಾ ಬತ್ತಾಲೆ ನಿಂತಾನೆ 5


ಕುದುರೆಯೇರಿ ಹಾರುತ ಬಂದಾನೆ

ಬೆದರಬೇಡೆಂದು ಶ್ರೀದವಿಠಲ ಅಂದಾನೆ 6

***