Showing posts with label ಇಲ್ಲೆ ಕುಳಿತಿದ್ದ ಭೂತವು ಒಂದು ಹಲ್ಲಿ ನುಂಗಿತು purandara vittala. Show all posts
Showing posts with label ಇಲ್ಲೆ ಕುಳಿತಿದ್ದ ಭೂತವು ಒಂದು ಹಲ್ಲಿ ನುಂಗಿತು purandara vittala. Show all posts

Wednesday, 4 December 2019

ಇಲ್ಲೆ ಕುಳಿತಿದ್ದ ಭೂತವು ಒಂದು ಹಲ್ಲಿ ನುಂಗಿತು purandara vittala

ರಾಗ ಸುರುಟಿ ಆದಿತಾಳ

ಇಲ್ಲೆ ಕುಳಿತಿದ್ದ ಭೂತವು ||ಪ||
ಒಂದು , ಹಲ್ಲಿ ನುಂಗಿತು ಹದಿನಾಲ್ಕು ಲೋಕವ ||ಅ||

ಸೂಳೆಯ ಮನೆಯಲ್ಲಿ ಅದೊಂದು ಕೋಳಿ
ಕೋಳಿಯ ನಾಲಿಗೆ ಏಳುತಾಳು ಉದ್ದ
ಕೋಳಿ ನುಂಗಿತು ಏಳು ಕಾಳಿಂಗನಾಗನ್ನ
ಮೇಲೆದ್ದು ಬೇಡಿತು ಸಿಂಹದ ಮರಿಯು ||

ಕಾನನದ ಒಳಗೊಂದು ಅದೊಂದು ಕೋಣ
ಕೋಣನ ಕೊರಳಿಗೆ ಮುನ್ನೂರು ಭಾವಿ
ಕೋಣ ನೀರಿಗೆ ಹೋಗಿ ಕ್ನೋಣಿ ಕಪಿಯ ಕೊಂದು ದೊಡ್ಡ
ಟೊಣ್ಣನ ಮನೆಯೊಳಗೌತಣವಯ್ಯ ||

ವೃಕ್ಷದ ಮೇಲೊಂದು ಸೂಕ್ಷ್ಮದ ಪಕ್ಷಿ
ಪಕ್ಷಿಭಕ್ಷಣವಾದ ಅಮೃತದ ಹಣ್ಣು
ಪಕ್ಷಿ ನೋಡಲು ಬಂದ ರಾಕ್ಷಸ ಬ್ರಾಹ್ಮಣ
ಶಿಕ್ಷೆಯ ಮಾಡಿದ ಪುರಂದರವಿಠಲ ||
***

pallavi

ille kuLitidda bhUtavu

anupallavi

ondu halli nungidu hadinAlku lOkava

caraNam 1

sULeya maneyalli adondu kOLi kOLiya nAlige Elu tALa udda
kOLi nungidu Elu kALinga nAganna mEleddu bEDidu simhada mariyu

caraNam 2

kAnanada oLagondu adondu kONa kONana koraLige munnUru bhAvi
kONa nIrige hOgi kSONi kapiya kondu doDDa ToNNana maneyoLa keLataNavayya

caraNam 3

vrkSada mElondu sUkSmada pakSi pakSi bhakSaNavAda amrtada haNNu
pakSi nODalu banda rAkSasa brhmaNa shikSeya mADida purandara viTTala
***