Showing posts with label ಯಾವ ಪಾಪಿಯ ದೃಷ್ಟಿ ತಾಕೀತೋ ಗೋಪಾಲಕೃಷ್ಣಗೆ kalimardhanakrishna. Show all posts
Showing posts with label ಯಾವ ಪಾಪಿಯ ದೃಷ್ಟಿ ತಾಕೀತೋ ಗೋಪಾಲಕೃಷ್ಣಗೆ kalimardhanakrishna. Show all posts

Monday, 2 August 2021

ಯಾವ ಪಾಪಿಯ ದೃಷ್ಟಿ ತಾಕೀತೋ ಗೋಪಾಲಕೃಷ್ಣಗೆ ankita kalimardhanakrishna

ಯಾವ ಪಾಪಿಯ ದೃಷ್ಟಿ ತಾಕೀತೋ ಗೋಪಾಲಕೃಷ್ಣಗೆ ಪ.

ಪಾಲು ಮೊಸರು ವೊಂದನಾದರು

ಯಾವ ಕಾರಣದಿ ಕುಡಿಯಲೊಲ್ಲೆ ಪೇಳೋ

ಯೆನಗೆ ಬಾಲಾ ಭೂಪಾಲ ಗುಣಶೀಲಾ 1

ದಾವಪುಣ್ಯವತಿಯ ಕಣ್ಣು ಹತ್ತಿತೋ

ನೆಲುವಿಗಿಟ್ಟ ಬೆಣ್ಣೆಯ ಮುಟ್ಟುವುದಿಲ್ಲಾ

ಬಟ್ಟಲಲ್ಲಿಡುವೆವೋ 2

ಕಪ್ಪವಾದರು ಇಡುವೇನು ಬಾ

ಅಪ್ಪ ವೇಣುಗೋಪಾಲಾ

ತುಪ್ಪ ಸಕ್ಕರಿ ನೀಡುವೆನು

ಚಪ್ಪರಿಸು ನೋಡುವೆನು

ಕಾಳಿಮರ್ಧನಕೃಷ್ಣಗೆ 3

***