ಕಾಖಂಡಕಿ ಶ್ರೀ ಕೃಷ್ಣದಾಸರು
ಸ್ಮರಿಸೆನ್ನ ಮನವೇ ಯಾದವ ರಾಯನಾ| ಸರಸಿಜೊವನುತ ಭಕುತರ ಪ್ರೀಯನಾ ಪ
ವರನಿಗ ಮೋಯಿದವನಾ ಶೀಳಿ ಎಳಹಿದವನಾ| ಶರಧಿ ಮಥನ ಗೋಸುಗನ ಪೊತ್ತನಾ ಧರಣಿಯಾ ತನ್ನ ಕೋರೆ ದಾಡಿಲಿರಿಸಿದಿಹನಾ| ಶರಣ ಪ್ರಲ್ಹಾದನ ಸುಸ್ಮರಣೆ ಗೊಲಿದನಾ1
ಭೂಸುರೋತ್ತಮನಾಗಿ ದಾನವ ಬೇಡಿದನಾ| ಹೇಸದೇ ಕ್ಷತ್ರಿಯರ ಕುಲ ಕೊಂದನಾ| ವಾಸು-ಕ್ಯಾ ಭರಣನ ಧನುವ ಮುರಿದವನಾ| ವಾಸವಾತ್ಮಜ ಮಿತ್ರ ದೇವಕಿ ಕಂದನಾ2
ಪತಿವೃತೆ ನಾರಿಯರ ವೃತಭಂಗ ಮಾಡಿದನಾ| ಸಿತ ಹಯವೇರಿದ ಶ್ರೀ ಜಗದೀಶನಾ| ಪತಿತ ಪಾವನನಾದಾ ಅನಂತಾವತಾರನ| ನುತ ಗುರು ಮಹಿಪತಿ ನಂದನ ಪ್ರೀನಾ3
***