ಪುರಂದರದಾಸರು
ಸಂಸಾರವೆಂಬ ಸಾಗರವನುತ್ತರಿಸುವರೆ ಕಂಸಾರಿಯೆಂಬ ನಾಮವೊಂದೆ ಸಾಕು ಮರುಳೆ ಪ.
ಯತಿಯಾಗಬೇಡ ವೈರಾಗ್ಯವರಿತು ಸಕಲವ್ರತವ ಮಾಡುವೆನೆಂಬ ನೇಮ ಬೇಡ ||ಶ್ರುತಿ - ಸ್ಮøತಿಗಳನರಿತು ನಡೆವೆನೆನಬೇಡ ಶ್ರೀ -ಪತಿಯ ಶ್ರೀನಾಮವೊಂದೆ ಸಾಕು ಮರುಳೆ 1
ತನುವ ದಂಡಿಸಿ ತುದಿಯ ಕೋಡುಗಲ್ಲಿನ ಮೇಲೆವನಿತೆಯನು ಬಿಟ್ಟು ತಪವಿರಲು ಬೇಡ ||ಅನುವರಿತು ನೀರೊಳಗೆ ಬಿಡದೆ ಮುಳುಗಲುಬೇಡ |ವನಜಾಕ್ಷ ನಾಮವೊಂದೇ ಸಾಕು ಮರುಳೆ 2
ತೀರ್ಥಯಾತ್ರೆಗೆ ನೀನು ತಿರುಗಿ ಝೊಂಪಿಸಿ ಕೃ -ತಾರ್ಥನಾದೆನೆಂಬ ಹೆಮ್ಮೆ ಬೇಡ ||ಧೂರ್ತಭಂಜನ ನಮ್ಮ ಪುರಂದರವಿಠಲ ಸಂ -ಕೀರ್ತಿನೆಯ ಮಾಡಿ ಮೋಕ್ಷವನೈದು ಮರುಳೆ 3
********