Showing posts with label ಇಂದಿರೆಯರಸ ಸುಕುಮಾರ ಇಂತುನೊಂದವಳ ಬಳಿಗೇಕೆ hayavadana. Show all posts
Showing posts with label ಇಂದಿರೆಯರಸ ಸುಕುಮಾರ ಇಂತುನೊಂದವಳ ಬಳಿಗೇಕೆ hayavadana. Show all posts

Wednesday, 1 September 2021

ಇಂದಿರೆಯರಸ ಸುಕುಮಾರ ಇಂತುನೊಂದವಳ ಬಳಿಗೇಕೆ ankita hayavadana

 ..

ಇಂದಿರೆಯರಸ ಸುಕುಮಾರ ಇಂತುನೊಂದವಳ ಬಳಿಗೇಕೆ ಬಾರಇಂದವನ ಬೇಗ ತೋರ ಕರತಾರದಿರೆಕೊಂದಲ್ಲದೆ ಬಿಡ ಸಖಿ ಮಾರ ಪ.


ಮಧುರೆಗೆ ಪೋಗಿ ನಮ್ಮ ಮರೆದ ಅಲ್ಲಿಇದಿರಾದ ಖಳರನು ಜರಿದಕದನಕರ್ಕಶನೆಂಬ ಬಿರುದ ತೋರಿ ತನ್ನಪದಕೆರಗಿದವರ ಪೊರೆದ 1


ಕಂದರ್ಪಕೋಟಿಯ ಗೆಲುವ ಇವಸೌಂದರ್ಯದಿಂದತಿ ಚೆಲುವನಂದನ ಕಂದ ಭಕ್ತರಿಗೊಲಿವ ಇವನಂದನ ಮುನಿವೃಂದಕೆ ಸಲುವ 2


ಕೊಡುವನು ಬೇಡಿದ ಫಲವ ಇವಬಿಡ ಸಖಿ ಖಳರೊಳು ಛಲವಒಡಂಬಡಿಸಿ ರಿಪುವ ಗೆಲುವನೆಂದುಮೃಡ ಬಲ್ಲನಿವನ ಕೌಶಲವ3


ಇಂಥ ಭವದ ದುರಂತ ಬಲುಸಂತಾಪವನುಂಬ ಭ್ರಾಂತಅಂಥಾ ಹರಿಯೊಳೆನ ಪಂಥಸಲ್ಲಸಂತತ ನಿನಗೆ ನಿಶ್ಚಿಂತ 4


ಇನ್ನಾದರೆ ಸುಪ್ರಸನ್ನ ನಮ್ಮಚೆನ್ನಿಗ ಹಯವದನನ್ನವರ್ಣಿಸಿ ವರ್ಣಿಸಿ ನಿನ್ನವನ ತಾರೆಹೆಣ್ಣೆತೋರೆ ಬೇಗದಿ ಅವನ 5

***