ಏನೆಂದು ಬಣ್ಣಿಸುವೆನು ಗುರುವಿನ ನಾನು | ತಾನಂದವರಿಗಿನ್ನು ಸ್ವಾನಂದ ಸುಖವ ನೀಡುವಾ ಪ
ತಾಯಿಯಂಬೆನೆ ಮೋಹದೀ | ಬಾಲಕ ಧೃವನಾ | ತಾಯಿಗಾಯ್ದಳೆ, ಸ್ನೇಹದಿ ಜನಕನೆಂಬೆÉನೆ | ನ್ಯಾಯದಿ ಪ್ರಲ್ಹಾದನ ಜನಕ ಕಾಯ್ದನೆ ನೋಡಮ್ಮಾ 1
ಬಂಧುಯಂಬೆನೆ ಜಗದೊಳು ವಿಭೀಷಣನ್ನಾ | ಬಂದು ಕಾಯ್ದನೆ, ಇಳೆಯೊಳು ಆಪ್ತನೆಂಬೆÉನೆ | ಸದು ವಿಗ್ರಹದಿ ಗಜೇಂದ್ರರ ನಾಪ್ತರು ಕಾಯ್ದರೇ 2
ಇಂತು ಸಂಬಂಧ ಸ್ನೇಹದಾ | ಸಾಸಿರ ಮಡಿಯಾ | ಸಂತತ ಕೃಪೆಯಾ ಬೀರಿದಾ | ಮಹಿಪತಿ ಕಾಯಾ | ಪಂಥವರಿಯದಾ ಪರಮ ಭ್ರಾಂತನಾನು | ದ್ಧರಿಸಿದ ನೆನ್ನಾ 3
***