" ಶ್ರೀ ಟಿ ಆರ್ ಶ್ರೀನಿವಾಸಮೂರ್ತಿ ( ಶ್ರೀ ಜಯಾಪತಿ ವಿಠ್ಠಲರಿಗೆ ) ನೀಡಿದ ಅಂಕಿತ ಪದ " by uragadri vasa vittala
ಜಯಾಪತಿ ವಿಠಲಾ
ಕರುಣಿಸು ಎನ್ನಯ ।
ತೋಯಜ ಪದ
ದಾಸನೆಂದೆನಿಸೋ ।। ಪಲ್ಲವಿ ।।
ಕರಣ ಶುದ್ಧಿಯನಿತ್ತು
ಹರಿ ಗುರು ಸೇವೆಯ ।
ನಿರುತ ಕ್ರಿಯೆಗಳಲ್ಲಿ
ನಿರ್ಮಮತೆಯಿತ್ತು ।। ಚರಣ ।।
ಸ್ವೋಚಿತ ಕಾರ್ಯದಿ
ಸನ್ಮನವನಿತ್ತು ।
ಕೀಚಕಾರಿಪ್ರಿಯ ನಿನ್ನ
ಭಕ್ತನೆಂದೆನಿಸಯ್ಯ ।। ಚರಣ ।।
ಉರಗಾದ್ರಿ ವಾಸ ವಿಠ್ಠಲ
ನಿನ್ನವರ ।
ಪೊರೆದಂತೆ ಪೊರೆವುದು
ಶರಣರ ಮಂದಾರ ।। ಚರಣ ।।
***