Showing posts with label ಕಣ್ಣಾರೆ ಕಂಡೆನಯ್ಯಪದ್ಮನಾಭನ್ನ purandara vittala KANNAARE KANDENAYYA PADMANAABHANNA. Show all posts
Showing posts with label ಕಣ್ಣಾರೆ ಕಂಡೆನಯ್ಯಪದ್ಮನಾಭನ್ನ purandara vittala KANNAARE KANDENAYYA PADMANAABHANNA. Show all posts

Thursday, 2 December 2021

ಕಣ್ಣಾರೆ ಕಂಡೆನಯ್ಯಪದ್ಮನಾಭನ್ನ purandara vittala KANNAARE KANDENAYYA PADMANAABHANNA

ಕಣ್ಣಾರೆ ಕಂಡೆನಯ್ಯಪದ್ಮನಾಭನ್ನ|

ಕಣ್ಣಾರೆ ಕಂಡೆನಯ್ಯಪದ್ಮನಾಭನ್ನ|

ಪದ್ಮನಾಭನ್ನ ಅನಂತಪದ್ಮನಾಭನ್ನ

ಪದ್ಮನಾಭನ್ನ ಅನಂತಪದ್ಮನಾಭನ್ನ||

ಪದ್ಮತೀರ್ಥ ಸ್ನಾನಮಾಡಿ ಪಟ್ಟೆ ಮಡಿಯನುಟ್ಟು ಕೊಂಡು

ಪಟ್ಟೆ ನಾಮಹಾಕಿಕೊಂಡ ಪಾದಪದ್ಮವಾ||

ಕಣ್ಣಾರೆ ಕಂಡೆನಯ್ಯ ಪದ್ಮನಾಭನ್ನ||

ಗರುಡಗಂಬ ದರ್ಶನ ಮಾಡಿ 

ಗರುಡ ದೇವರ ಮುಂದೆ ನಿಂತು

ಗರುಡನಾಭಿ ಕಮಲದಿಂದ ಪಾದಪದ್ಮವಾ||

ಕಣ್ಣಾರೆ ಕಂಡೆನಯ್ಯ ಪದ್ಮನಾಭನ್ನ||

ಐದುಲಕ್ಷ ಬ್ರಾಹ್ಮಣರಿಗೆ

ಅನ್ನದಾನವನ್ನೆ ಮಾಡಿ

ಮುದ್ದು ಪುರಂದರ ವಿಠಲಾನ ಪಾದಪದ್ಮವಾ||

ಕಣ್ಣಾರೆ ಕಂಡೆನಯ್ಯ ಪದ್ಮನಾಭನ್ನ||

***