Audio by Mrs. Nandini Sripad
ಅಭಿನವ ಪ್ರಾಣೇಶ ವಿಠ್ಠಲರ ಶ್ರೀ ಮಹದೇವರ ಸ್ತೋತ್ರ ಸುಳಾದಿ
ರಾಗ ಮೋಹನ ಧ್ರುವತಾಳ
ಗಜ ಅಜನಾಂಬರ ಅಜಗವರಮಂದಿರ
ದ್ವಿಜ ರವಿ ಸುರಗಣ ವದನಾಕ್ಷ ವಿರೂಪಾಕ್ಷ
ಗಜ ಋಷಿಯಾಂಬಕ ತ್ರಿಯಾಂಬಕ
ಗಜ ದನು ಚೌರಾತಿ ಭೂಷಿತ ವಿಭೂತಿ
ಕುಜದಾತ ಸದ್ಭಕ್ತ ಕುಜನ ಕುಠಾರನೆ
ನಿಜ ಮಹಾಸ್ಮಶಾನವಾಸ ಭೂತೇಶನೇ
ತ್ರಿಜಗ ಪಾವನ ಗಂಗಾಧರ ದೇವನೆ
ಅಜಪಿತಭಿನವ ಪ್ರಾಣೇಶವಿಠಲನ
ನಿಜದಾಸ ಗೌರೀಶ ಕೈಲಾಸವಾಸ ॥ 1 ॥
ಮಟ್ಟತಾಳ
ಕವಿಗಣ ಪರಿಪಾಲ ಈಶ ಕಾಲ ಕಾಲ
ಭವಭಯನಾಶಕನೆ ಭವಿಗಣ ಪೋಷಕನೆ
ಸುವಿಶಾಲ ಸುಮಹಿಮ ಸುಮಗೋಲ ವಿರಾಮ
ಪವನ ಸಪ್ತವಿನುತ ಪವನಪ ತನುಜಾತ
ಕವಿಗೇಯ ಅಭಿನವ ಪ್ರಾಣೇಶವಿಠಲನ
ಜಾವ ಜಾವಕೆ ಭಜಿಪ ಭಾಗ್ಯ ಕೊಡು ಶಂಭು ॥ 2 ॥
ತ್ರಿಪುಟತಾಳ
ಅಗಜೆ ಮನೋಹರ ಅಘಹರಣ ನಗಚಾಪ
ತ್ರಿಗುಣೋತ್ತಮ ಕಾಯ ವಿಗತ ಮಾಯಾಮೃಗ
ಡಮರುಗ ತ್ರಿಶೂಲ ಖಟವ ಪಾಣಿ
ನಿಗಮ ತುರಗ ಭೂರಥ ವೇದಸಾರಥಿ
ನಗಧರ ಶರ ಮುಪ್ಪುರಹರನೆ
ಜಗದೀಶ ಅಭಿನವ ಪ್ರಾಣೇಶವಿಠಲನ
ಹಗಲಿರುಳು ಪೊಗಳಿ ನರ್ತಿಪ ದೇವದೇವ ॥ 3 ॥
ಅಟ್ಟತಾಳ
ಗರಳಕಂಠನೆ ಶಿವ ಹರ ಹರ ಮಹಾದೇವ
ದೂರ್ವಾಸ ಜಿತಕಾಮ ದ್ರೌಣಿ ಅಶ್ವತ್ಥಾಮ
ಪರಮ ಭಾಗವತ ಶಿರೋಮಣಿ ಶುಕಮುನಿ
ಪರಮ ವೈರಾಗ್ಯಧಿಪತಿ ಶಂಭೊ ಪಶುಪತಿ ಕ್ಷಿತಿ
ಧರ ಸ್ಮರಹರ ಸುರವರ ಶಂಕರ
ಸಿರಿವರ ಅಭಿನವ ಪ್ರಾಣೇಶವಿಠಲನ
ಚರಣ ವಾರಿಜಭೃಂಗ ಭಕ್ತಾಂತರಂಗ ॥ 4 ॥
ಆದಿತಾಳ
ತಾರಕ ಮಂತ್ರುಪದೇಶಕ ಗುರುವರ
ಶೀರಜ ಪತಿ ಪದ ವಾರಿಜ ಮಧುಕರ
ಘೋರ ಭವಾಂಬುಧಿ ತಾರಕ ಪುರಹರ ವರ
ಶ್ರೀರಮಣಭಿನವ ಪ್ರಾಣೇಶವಿಠಲನ
ಚಾರು ಚರಣಗಳಲ್ಲಿ ಮನವ ನಿಲ್ಲಿಸು ಜೀಯಾ ॥ 5 ॥
ಜತೆ
ವೈರಾಗ್ಯಾಧಿಪ ನಿಜ ವೈರಾಗ್ಯ ಕರುಣಿಸು
ಶ್ರೀರಾಗಭಿನವ ಪ್ರಾಣೇಶವಿಠಲನ ಸಖನೆ ॥
***********