Audio by Mrs. Nandini Sripad
Audio by Vidwan Sumukh Moudgalya
ಶ್ರೀ ವಿಜಯದಾಸಾರ್ಯ ವಿರಚಿತ ಶ್ರೀಮದ್ ಅನಂತದೇವರ ವ್ರತಕಥೆ ಸುಳಾದಿ
ರಾಗ ಕಾಪಿ
ಧ್ರುವತಾಳ
ವ್ರತವೆ ಉತ್ತಮ ವ್ರತವು ಕ್ಷಿತಿಯೊಳಗೆ ನೋಡಲು
ಮತಿವಂತರಿಗೆ ಮುಕ್ತಿ ಪಥಕೆ ಮೊದಲೂ
ಲತೆ ಪಲ್ಲವಿಸಿದಂತೆ ಸತತದಲ್ಲಿ ಭಕ್ತಿ
ಪ್ರತಿದಿನ ಹೆಚ್ಚುವದು ಅತಿಶಯದಲ್ಲಿ
ಖತಿಗೊಳದಿರಿ ಶಾಶ್ವತವೆನ್ನಿರೊ ಜನರೂ
ಪತಿತರಾಗದೆ ಸಮ್ಮತ ಬಡುವದೂ
ಶತಕೋಟಿ ಅನ್ಯದೇವತಿಗಳ ವ್ರತಮಾಡೆ
ಹತವಾಗುವದು ಸುಕೃತವಿದ್ದದ್ದೂ
ಚತುರಮೂರುತಿ ನಮ್ಮ ವಿಜಯವಿಟ್ಠಲನಂತಾ
ವ್ರತಕಾವದು ಎಲ್ಲಿ ಪ್ರತಿಗಾಣೆ ಶ್ರುತಿಯೊಳು ॥ 1 ॥
ಮಟ್ಟತಾಳ
ಸುಮಂತ ಭೂಸುರನಾ ಕುಮಾರಿ ಸುಶೀಲೆ
ವಿಮಲಾ ಗುಣವಂತೆ ಶಮೆದಮೆಯಲ್ಲಿರಲು
ಸುಮಂತ ವಿಪ್ರಾ ಉತ್ತುಮ ಕೌಂಡಿಣ್ಯಗೆ
ಸುಮತಿಯಳನಿತ್ತಾ ಸುಮನಸರು ಮೆಚ್ಚೆ
ರಮೆಯರಸ ನಮ್ಮ ವಿಜಯವಿಟ್ಠಲನ್ನಾ -
ತುಮದೊಳಗೆ ನೆನೆದು ಯಮುನಾ ತೀರಕೆ ಬರಲೂ ॥ 2 ॥
ರೂಪಕತಾಳ
ಮೌನಿ ಕೌಂಡಿನ್ಯನು ಮಧ್ಯಾಹ್ನದಾ ಆನ್ಹಿಕೆಯನು
ಪ್ರಣವ ಪೂರ್ವಕದಿಂದಾರ್ಚನೆ ಮಾಡಪೋದಾ ಯ -
ಮುನಾ ನದಿ ಸಲಿಲಕೆ ಘನತೀವರದಿಂದ
ವನಿತೆ ಸುಶೀಲಿ ತಾ ವನಜಾಕ್ಷಿಯರು ವೃತ -
ವನು ಮಾಡುತಿರೆ ಆ ಕ್ಷಣದಿಂದ ಗಮನಿಸೀ
ಎನಗೆ ಪೇಳೆಂದವರನನುಸರಿಸಿ ಕೇಳಲೂ
ಸನುಮತ ಅನಂತನ ವ್ರತವೆಂದೆನಲೂ
ವಿನಯದಿಂದ ನಮಿಸಿ ಮನದಿಚ್ಛೆಲಿ ನೋಡಿ
ಏನನೂ ತಾಳಂದಾನಂತನ ಸೂತ್ರ ತೋಳಿಲಿ
ದಿನ ಭಾದ್ರಪದ ಶೋಭನ ಶುಕ್ಲ ಚತುರ್ದಶಿ
ದಿನದಲ್ಲಿ ವಾಮಲೋಚನೆ ಕಟ್ಟಿದೊಳೊಲಿದೂ
ಪ್ರಣತಾರ್ಥಿಹರ ನಮ್ಮ ವಿಜಯವಿಟ್ಠಲನ್ನ
ನೆನದು ಪತಿಯಾ ಕೂಡಿ ಮನೆಗೆ ಬರುತಿರೆ ॥ 3 ॥
ಝಂಪೆತಾಳ
ದಾರಿಯೊಳಗೆ ಮದವಾರುಣಾ ಶ್ಯಂದನಾ
ವಾರುಗಂಗಳು ಪರಿವಾರಾ ವೊಪ್ಪುತಲಿರೇ
ಸಾರ ರತುನಾ ಬಂಗಾರಮಯದಾ ಶೃಂ -
ಗಾರದಾ ಮಂದಿರಾ ತೋರುತಿರಲು ಮನಕೆ
ಕಾರುಣಿಕವು ಮುಂದೆ ನಾರಿಯೊಡನೆ ಮುನಿ -
ವರೇಣ್ಯ ತನ್ನಯಾ ಕುಟೀರಕ್ಕೆ ಬರಲಾಗಿ
ಕಾರಣ ಪುರುಷ ಶಿರಿ ವಿಜಯವಿಠಲನ್ನಾ
ದೋರದಾ ಮಹಿಮೇಲಿ ಪೂರೈಸಿತು ಭಾಗ್ಯಾ ॥ 4 ॥
ತ್ರಿವಿಡಿತಾಳ
ಎತ್ತ ನೋಡಿದರತ್ತ ತುಳುಕಲು ಭಾಗ್ಯ
ನಿತ್ಯ ಸಂದಣಿಯಿಂದ ಇತ್ತಮುನಿ ಇರುತಿರೆ
ಚಿತ್ತದೊಲ್ಲಭ ಕರದಿ ಸೂತ್ರವಿರಲೂ ಮುನಿ -
ಪೋತ್ತುಮ ನುಡಿಸಿ ಅದರುತ್ತರವ ತಿಳಿದು
ಎತ್ತಣ ವೃತವೆಂದು ಮಿತ್ರಿಯ ಜರೆದು ದೋರಾ
ಕಿತ್ತು ಬಿಸುಟನಾಗಾ ಪಿತ್ತದೊಳಗೆ ತೆಗೆದು
ಉತ್ತಮ ಗುಣವಂತೆ ಎತ್ತಿ ಮನದಿ ಹಾ, ಯೆ -
ನುತ್ತ ಪಾಲಿನೊಳದ್ದಿ ತುತಿಸಿ ಗತಿ ಹರಿಯೆ -
ನುತ್ತ ಜತನ ಮಾಡಿ ಚಿತ್ತಜಾಪಿತ
ನಂತ ವಿಜಯವಿಟ್ಠಲರೇಯಗೆ
ಹತ್ತದವನಾಗಿ ಮುನಿ ಮತ್ತಾ ಕ್ಲೇಶದೊಳಾದ ॥ 5 ॥
ಅಟ್ಟತಾಳ
ಬಡತನ ಬಂದು ಬೆಂಬಿಡದಲೆ ಕಾಡಲು
ಒಡನೆ ಬಿದ್ದವರೆಲ್ಲಾ ಬಡದರು ಪಗೆಯಾಗಿ
ಪಡೆದ ಪರಿಚಾರಾ ಕಿಡಿಗೆಡಿಗೆ ಮುನಿ
ದಡಿಗಡಿಗೆ ಬೈದೊಡಂಬಡದಿಪ್ಪಾರು
ಕಡುನೊಂದು ಯತಿ ತನ್ನ ಮಡದಿ ವಿನಯದಿಂದಾ
ನುಡಿವ ಮಾತನು ತನ್ನೊಡಲೊಳು ಚಿಂತಿಸಿ
ಸುಡು ಎನ್ನ ಶರೀರ ಬಿಡುವೆ ರಂಗನ ದಿವ್ಯಾ
ಅಡಿಗಳ ಬಳಿಯಲ್ಲಿ ತಡಿಯದಲೆ ಪೋಗಿ
ಕೊಡವೆನೆನುತ ನೀರು ಕುಡಿಯದೆ ಪೊರಮಟ್ಟಾ
ಅಡವಿ ಗಿಡಗಳು ಪಿಡಿದು ಕ್ಲೇಶದಿಂದ
ಮಿಡಕುತಾಳಲ್ಲಿ ಕಾಲೊಡದು ನೆತ್ತರಧಾರೆ
ಇಡುತಲಿ ಬಲುದೂರಾ ಹುಡುಕುತಾ ಮಹೇಂದ್ರ
ದಡಿಗೆ ಬಂದನು ಋಷಿ
ಕಡು ಕೃಪಾಸಾಗರಾ ನಮ್ಮ ವಿಜಯವಿಟ್ಠಲನಂತಾ
ತಡಿಯೆ ಕೌಂಡಿಣ್ಯನು ನಡುಗಿ ಬಾಯಾರಿ ॥ 6 ॥
ಆದಿತಾಳ
ಬರುತಾ ಚೂತಾ ತರುವು ಸರೋ -
ವರಾವೆರಡು ಗೋ ವೃಷಭಾ
ಖರ ಮದಕುಂಜರಗಳನು ನಿರೀಕ್ಷಿಸಿ ಅನಂತನಾ
ಕುರುಹವಾ ನೀವು ತೋರಿರಿ ಎಂದು ಬೆಸಗೊಳಲು
ಅರಿಯಲಿಲ್ಲೆಂದು ಉತ್ತರ ನೆರದಾವು ಕೊಡಲು
ಪರಮ ಮೂರ್ಛಿತನಾಗಿ ವರಗಿದ ಧರಿಗೆ ಮುನಿ
ಹರಿ ಅರಿದು ವೃದ್ಧ ಭೂಸುರನಾಗಿ ಬಂದು ವಿ -
ವರಿಸಿ ತಿಳಿದು ತಡವರಿಸಿ ಕಿಂ -
ಕರ ನೋಡಿರದೆ ಬೆಂಬಲವಾಗಿ
ಕರತಂದು ತನ್ನ ನಿಜ ಸ್ವರೂಪವಾ ತೋರಿ ಮುನಿಯಾ
ಪರಿಶ್ರಮ ಪರಿಹರಿಸಿ ಕರುಣವ ಮಾಡಿದನು
ಸುರರಿಗಸಾಧ್ಯವು ಮರಿಯದೆ ಪದಿನಾಲ್ಕೋ -
ತ್ಸರಾನಂತನಾ ವೃತಚರಿಸಿ ಸುಖದಿ ಬಂದು
ವರ ಪುನರ್ವಸು ಸ್ಥಾನಾ ಇರ ಹೇಳಿ ಹಿಂದೆ ಕಂಡಾ
ದರ ಶಂಕೆಯನು ಪೇಳಿ ಹರಿ ಅಂತರ್ಧಾನನಾದಾ
ತಿರುಗಿ ಕೌಂಡಿಣ್ಯ ಮುನೀಶ್ವರಾ ಅಕ್ಲೇಶದಲ್ಲಿ
ತರುಣಿ ಜ್ಞಾನವಾ ನೆನೆದು ಹರಿಯಾ ಕೊಂಡಾಡುತ್ತಾ
ಭರದಿಂದ ತನ್ನ ಮಂದಿರ ಕೈತಂದು ವೃತವ
ಚರಿಸಿದ ಮನಃ ಪೂರ್ವದರ ಭಕುತಿ ತಪ್ಪದಲೇ
ಸರಿ ಇಲ್ಲಾದೈಶ್ವರ್ಯ ಪರಿಪೂರ್ಣವಾಗಿ ಬಾಳಿ
ಮರಳೆ ಸೇರಿದ ತನ್ನವರ ಸ್ಥಾನದಲಿ ಪೋಗಿ
ಶಿರಿ ಶ್ರೀಮದನಂತ ವಿಜಯವಿಟ್ಠಲರೇಯಾ
ಸ್ಥಿರವಾದಾನಂದು ಮೊದಲು ಶರಧಿ ದಕ್ಷಿಣಾದಲ್ಲಿ ॥ 7 ॥
ಜತೆ
ಯಮ ಸುತನು ನೋತು ಬಲು ಶ್ರಮದಿಂದ ದೂರಾದ
ತಮರಿಗೆ ಸಲ್ಲಾದಿದು ವಿಜಯವಿಟ್ಠಲ ಬಲ್ಲಾ ॥
**********
ರಾಗ ಕಾಪಿ
ಧ್ರುವತಾಳ
ವ್ರತವೆ ಉತ್ತಮ ವ್ರತವು ಕ್ಷಿತಿಯೊಳಗೆ ನೋಡಲು |
ಮತಿವಂತರಿಗೆ ಮುಕ್ತಿ ಪಥಕೆ ಮೊದಲೂ |
ಲತೆ ಪಲ್ಲವಿಸಿದಂತೆ ಸತತದಲ್ಲಿ ಭಕ್ತಿ |
ಪ್ರತಿದಿನ ಹೆಚ್ಚುವದು ಅತಿಶಯದಲ್ಲಿ |
ಖತಿಗೊಳದಿರಿ ಶಾಶ್ವತವೆನ್ನಿರೋ ಜನರು |
ಪತಿತರಾಗದೆ ಸಮ್ಮತ ಬಡುವದು |
ಶತಕೋಟಿ ಅನ್ಯದೇವತಿಗಳ ವ್ರತಮಾಡೆ |
ಹತವಾಗುವದು ಸುಕೃತವಿದ್ದದ್ದೂ |
ಚತುರಮೂರುತಿ ನಮ್ಮ ವಿಜಯವಿಠಲ ನಂತಾ |
ವ್ರತ ಕಾವುದು ಎಲ್ಲಿ ಪ್ರತಿಗಾಣೆ ಶ್ರುತಿಯೊಳು ||1||
ಮಟ್ಟತಾಳ
ಸುಮಂತ ಭೂಸುರನಾ ಕುಮಾರಿ ಸುಶೀಲೆ |
ವಿಮಲಾ ಗುಣವಂತೆ ಶಮೆದಮೆಯಲ್ಲಿರಲು |
ಸುಮಂತ ವಿಪ್ರಾ ಉತ್ತುಮ ಕೌಂಡಿಣ್ಯಗೆ |
ಸುಮತಿಯಳಾನಿತ್ತಾ ಸುಮನಸರು ಮೆಚ್ಚೆ |
ರಮೆಯರಸ ನಮ್ಮ ವಿಜಯವಿಠಲ ನ್ನಾ- |
ತುಮದೊಳಗೆ ನೆನೆದು ಯಮುನಾ ತೀರಕೆ ಬರಲೂ ||2||
ರೂಪಕತಾಳ
ಮೌನಿ ಕೌಂಡಿಣ್ಯನು ಮಧ್ಯಾಹ್ನದಾ ಆನ್ಹಿಕೆಯನು |
ಪ್ರಣವ ಪೂರ್ವದಿಂದಾರ್ಚನೆ ಮಾಡಪೋದಾ ಯ - |
ಮುನ ನದಿ ಸಲಿಲಕೆ ಘನತೀವರದಿಂದ |
ವನಿತೆ ಸುಶೀಲಿತಾ ವನಜಾಕ್ಷಿಯರು ವೃತ - |
ವನು ಮಾಡುತಿರೆ ಆ ಕ್ಷಣದಿಂದ ಗಮನಿಸೀ |
ಎನಗೆ ಪೇಳೆಂದವರನು ಅನುಸರಿಸಿ ಕೇಳಲೂ |
ಸನುಮತ ಅನಂತನ ವ್ರತವೆಂದೆನಲೂ |
ವಿನಯದಿಂದ ನಮಿಸಿ ಮನದಿಚ್ಛೆಲಿ ನೋಡಿ |
ಏನನೂ ತಾಳದಾನಂತನ ಸೂತ್ರ ತೋಳಿಲಿ |
ದಿನ ಭಾದ್ರಪದ ಶೋಭನ ಶುಕ್ಲ ಚತರ್ದಶಿ |
ದಿನದಲ್ಲಿ ವಾಮಲೋಚನೆ ಕಟ್ಟಿದಳೊಲಿದೂ |
ಪ್ರಣತಾರ್ಥಿಹರ ನಮ್ಮ ವಿಜಯವಿಠಲನ್ನ |
ನೆನದು ಪತಿಯಾ ಕೂಡಿ ಮನೆಗೆ ಬರುತಿರೆ ||3||
ಝಂಪೆತಾಳ
ದಾರಿಯೊಳಗೆ ಮದವಾರುಣಾ ಶ್ಯಂದನಾ |
ವಾರುಗಂಗಳು ಪರಿವಾರಾವೊಪ್ಪುತಲಿರೇ |
ಸಾರರತುನಾ ಬಂಗಾರಮಯದಾ ಶೃಂ - |
ಗಾರದಾ ಮಂದಿರಾ ತೋರುತಿರಲು ಮನಕೆ
ಕಾರುಣಿಕವು ಮುಂದೆ ನಾರಿಯೊಡನೆ ಮುನಿ - |
ವರೇಣ್ಯ ತನ್ನಯಾ ಕುಟೀರಕ್ಕೆ ಬರಲಾಗಿ |
ಕಾರಣ ಪುರುಷ ಶಿರಿ ವಿಜಯವಿಠಲನ್ನ |
ದೋರದಾ ಮಹಿಮೇಲಿ ಪೂರೈಸಿತು ಭಾಗ್ಯಾ ||4||
ತ್ರಿವಿಡಿತಾಳ
ಎತ್ತ ನೋಡಿದರತ್ತ ತುಳುಕಲು ಭಾಗ್ಯ |
ನಿತ್ಯಸಂದಣಿಯಿಂದ ಇತ್ತಮುನಿ ಇರುತಿರೆ |
ಚಿತ್ತದೊಲ್ಲಭ ಕರದಿ ಸೂತ್ರವಿರಲೂ ಮುನಿ - |
ಪೋತ್ತುಮ ನುಡಿಸಿ ಅದರುತ್ತರವ ತಿಳಿದು |
ಎತ್ತಣ ವೃತವೆಂದು ಮಿತ್ರಿಯ ಜರೆದು ದೋರಾ |
ಕಿತ್ತು ಬಿಸುಟನಾಗಾ ಪಿತ್ತದೊಳಗೆ ತೆಗೆದು |
ಉತ್ತಮಗುಣವಂತೆ ಎತ್ತಿ ಮನದಿ ಹಾ, ಯೆ - |
ನುತ್ತ ಪಾಲಿನೊಳದ್ದಿ ತುತಿಸಿ ಗತಿ ಹರಿಯೆ - |
ನುತ್ತ ಜತನ ಮಾಡಿ ಚಿತ್ತಜಾಪಿತ |
ನಂತ, ವಿಜಯವಿಠಲ ರೇಯಗೆ |
ಹತ್ತದವನಾಗಿ ಮುನಿ ಮತ್ತಾ ಕ್ಲೇಶದೊಳಾದ ||5||
ಅಟ್ಟತಾಳ
ಬಡತನ ಬಂದು ಬೆಂಬಿಡದಲೆ ಕಾಡಲು |
ಒಡನೆ ಬಿದ್ದವರೆಲ್ಲಾ ಬಡದರು ಪಗೆಯಾಗಿ |
ಪಡೆದ ಪರಿಚಾರಾ ಕಿಡಿಗೆಡಿಗೆ ಮುನಿ |
ದಡಿಗಡಿಗೆ ಬೈದೊಡಂಬಡದಿಪ್ಪಾರು |
ಕಡುನೊಂದು ಯತಿ ತನ್ನ ಮಡದಿ ವಿನಯದಿಂದಾ |
ನುಡಿವ ಮಾತನು ತನ್ನೊಡಲೊಳು ಚಿಂತಿಸಿ |
ಸುಡು ಎನ್ನ ಶರೀರ ಬಿಡುವೆ ರಂಗನ ದಿವ್ಯಾ |
ಅಡಿಗಳ ಬಳಿಯಲ್ಲಿ ತಡಿಯದಲೆ ಪೋಗಿ |
ಕೊಡವೆನೆನುತ ನೀರು ಕುಡಿಯದೆ ಪೊರಮಟ್ಟಾ |
ಅಡವಿ ಗಿಡಗಳು ಪಿಡಿದು ಕ್ಲೇಶದಿಂದ |
ಮಿಡಕುತಾಳಲ್ಲಿ ಕಾಲೊಡದು ನೆತ್ತರಧಾರೆ |
ಇಡುತಲಿ ಬಲುದೂರಾ ಹುಡುಕುತಾ ಮಹೇಂದ್ರ |
ದಡಿಗೆ ಬಂದನು ಋಷಿ |
ಕಡು ಕೃಪಾಸಾಗರಾ ನಮ್ಮ ವಿಜಯವಿಠಲ ನಂತಾ |
ತಡಿಯೆ ಕೌಂಡಿಣ್ಯನು ನಡುಗಿ ಬಾಯಾರಿ ||6||
ಆದಿತಾಳ
ಬರುತಾ ಚೂತಾ ತರುವು ಸರೋ - |
ವರಾವೆರಡು ಗೋ ವೃಷಭಾ |
ಖರ ಮದಕುಂಜರಗಳನು ನಿರೀಕ್ಷಿಸಿ ಅನಂತನಾ |
ಕುರುಹವಾ ನೀವು ತೋರಿರಿ ಎಂದು ಬೆಸಗೊಳಲು |
ಅರಿಯಲಿಲ್ಲೆಂದು ಉತ್ತರ ನೆರದಾವು ಕೊಡಲು |
ಪರಮ ಮೂರ್ಛಿತನಾಗಿ ಒರಗಿದ ಧರಿಗೆ ಮುನಿ |
ಹರಿ ಅರಿದು ವೃದ್ಧ ಭೂಸುರನಾಗಿ ಬಂದು ವಿ -|
ವರಿಸಿ ತಿಳಿದು ತಡವರಿಸಿ ಕಿಂ -
ಕರ ನೋಡಿರದೆ ಬೆಂಬಲವಾಗಿ |
ಕರತಂದು ತನ್ನ ನಿಜ ಸ್ವರೂಪವಾ ತೋರಿ ಮುನಿಯಾ |
ಪರಿಶ್ರಮ ಪರಿಹರಿಸಿ ಕರುಣವ ಮಾಡಿದನು |
ಸುರರಿಗಸಾಧ್ಯವು ಮರಿಯದೆ ಪದಿನಾಲ್ಕೋ - |
ತ್ಸರಾನಂತನಾ ವೃತಚರಿಸಿ ಸುಖದಿ ಬಂದು |
ವರ ಪುನರ್ವಸು ಸ್ಥಾನಾ ಇರ ಹೇಳಿ ಹಿಂದೆ ಕಂಡಾ |
ದರ ಶಂಕೆಯನು ಪೇಳಿ ಹರಿ ಅಂತರ್ಧಾನನಾದಾ |
ತಿರುಗಿ ಕೌಂಡಿಣ್ಯ ಮುನೀಶ್ವರಾ ಅಕ್ಲೇಶದಲ್ಲಿ |
ತರುಣಿ ಜ್ಞಾನವಾ ನೆನೆದು ಹರಿಯಾ ಕೊಂಡಾಡುತ್ತಾ |
ಭರದಿಂದ ತನ್ನ ಮಂದಿರ ಕೈತಂದು ವೃತವ |
ಚರಿಸಿದ ಮನಃ ಪೂರ್ವದರ ಭಕುತಿ ತಪ್ಪದಲೇ |
ಸರಿ ಇಲ್ಲಾದೈಶ್ವರ್ಯ ಪರಿಪೂರ್ಣವಾಗಿ ಬಾಳಿ |
ಮರಳೆ ಸೇರಿದ ತನ್ನವರ ಸ್ಥಾನದಲಿ ಪೋಗಿ |
ಶಿರಿ ಶ್ರೀಮದನಂತ ವಿಜಯವಿಠಲರೇಯಾ |
ಸ್ಥಿರವಾದಾನಂದು ಮೊದಲು ಶರಧಿ ದಕ್ಷಿಣಾದಲ್ಲಿ ||7||
ಜತೆ
ಯಮ ಸುತನು ನೋತು ಬಲು ಶ್ರಮದಿಂದ ದೂರಾದ
ತಮರಿಗೆ ಸಲ್ಲಾದಿದು ವಿಜಯವಿಠಲ ಬಲ್ಲಾ ||
********