..
kruti by Nidaguruki Jeevubai
ಮಂಗಳ ಮಾಧವಗೆ ಮಾರಮಣಗೆ
ಮಂಗಳ ಶ್ರೀಧರಗೆ ಪ
ರಂಗ ರಿಪುಮದ ಭಂಗ ಭವಗಜ
ಸಿಂಗ ಕರುಣಾಪಾಂಗ ಶ್ರೀಶಗೆ
ಗಂಗಾಜನಕಗೆ ತುಂಗ ಮಹಿಮಗೆ
ಭಂಗರಹಿತಗೆ ಅನಂಗಪಿತನಿಗೆ 1
ಭುವನ ಮೋಹನ ಸುಮನಸರ ಪ್ರಿಯ
ಕವಿಜನರ ಹೃದ್ಗøಹ ನಿವಾಸಗೆ
ನವನವ ಲೀಲೆಗಳ ತೋರ್ದಗೆ
ನವರತುನದಾರತಿಯ ಬೆಳಗಿರೆ 2
ಗರುಡಗಮನಗೆ ಉರಗಶಯನಗೆ
ಪರಮಪುರುಷಗೆ ಪುಣ್ಯಚರಿತಗೆ
ಉರಗಗಿರಿವಾಸನಿಗೆ ದೇವಗೆ
ಸುರರೊಡೆಯ ಶ್ರೀ ಶ್ರೀನಿವಾಸಗೆ3
ಸೌಮ್ಯನಾಮ ಸಂವತ್ಸರದಂದು
ನೇಮದಿಂದ ಭಜಿಪ ಭಕುತರ
ಕಾಮ್ಯಕರ್ಮವ ತರಿದು ಪೊರೆಯುವ
ಕಮಲನಾಭ ವಿಠ್ಠಲನ ಪ್ರತಿದಿನ4
***