ಶ್ರೇಯ ಸುಖ ಬೀರುತ ಸದೋದಿತ ಮೂಡಿ ಪ
ಪೂರ್ವ ಪುಣ್ಯಾಚಲದಿ ಉದಯವಾದ ತೋರ್ವ ಭವಬಂಧವೆಂಬ ಕಗ್ಗತ್ತಲೆ ಹರಿಸಿದ 1
ಹೃದಯ ಕಮಲವಾಯಿತು ಸುವಿಕಾಸ ದ್ವ್ವಿಧಾ ಭಾವೆಂಬ ಚಕ್ರವಾ ಕೊಂದಾಯಿತು ಹರುಷ 2
ಸಂಚಿತ ಪ್ರಾಲಬ್ಧ ಕ್ರಿಯಮಾಣ ವಂಚನಿಲ್ಲದಾಯಿತು ಸಮರ್ಪಣ ಆಘ್ರ್ಯದಾನ 3
ಮಹಿಪತಿಗಾಯಿತು ಆನಂದೋದಯ ಸ್ವಹಿತದೋರಲು ಬಂದೆನಗೆ ತತ್ವೋಪಾಯ 4
***