Wednesday, 1 September 2021

ಶ್ರೇಯ ಸುಖ ಬೀರುತ ಸದೋದಿತ ಮೂಡಿ ankita mahipati

ಶ್ರೇಯ ಸುಖ ಬೀರುತ ಸದೋದಿತ ಮೂಡಿ ಪ  


ಪೂರ್ವ ಪುಣ್ಯಾಚಲದಿ ಉದಯವಾದ ತೋರ್ವ ಭವಬಂಧವೆಂಬ ಕಗ್ಗತ್ತಲೆ ಹರಿಸಿದ 1 

ಹೃದಯ ಕಮಲವಾಯಿತು ಸುವಿಕಾಸ ದ್ವ್ವಿಧಾ ಭಾವೆಂಬ ಚಕ್ರವಾ ಕೊಂದಾಯಿತು ಹರುಷ 2 

ಸಂಚಿತ ಪ್ರಾಲಬ್ಧ ಕ್ರಿಯಮಾಣ ವಂಚನಿಲ್ಲದಾಯಿತು ಸಮರ್ಪಣ ಆಘ್ರ್ಯದಾನ 3 

ಮಹಿಪತಿಗಾಯಿತು ಆನಂದೋದಯ ಸ್ವಹಿತದೋರಲು ಬಂದೆನಗೆ ತತ್ವೋಪಾಯ 4

***


No comments:

Post a Comment