..
kruti by ವೀರನಾರಾಯಣ Veeranarayana
ಪಾರ್ಥನ ಸಾರಥಿಯಾ ನೋಡಿದೆಯಾ ಪ
ಆರ್ತ ಜೀವನಿಗೆ ಕರ್ತವ್ಯವನುಗುರ್ತಿಸಿ ಪೇಳ್ವುದ ಪೂರ್ತಿಯ ರೀತಿಯಾ ಅ.ಪ.
ಗೀತೆಯ ಪೇಳಲು ವೇದಾಗಮಗಳಸಾರಧಾರೆಯ ಕರೆವನೆಂಬಂತೆಶ್ವೇತಾಶ್ವಂಗಳ ಕಡಿವಾಣಗಳಪ್ರೀತಿಲಿ ಪಿಡಿದಿಹ ಕೃಷ್ಣ ಮೂರುತಿಯ 1
ಭವದ ತೇರಿನಲಿ ಜೀವನನಿರಿಸಿ ನಾಲ್ಕರ್ಥಗಳನು ಜೋಡಿಸುತತವಕದಿ ತಾ ಹೊರಗಿರುತಲೆ ನಡೆಸಿಪ್ರೇರಿಪನೆಂಬಂತಿಹ ಶ್ರೀಪತಿಯ 2
ನೇತ್ರಕೆ ಜೀವನಯಾತ್ರೆಯ ಸಡೆಸುವಸೂತ್ರಧಾರನೆನೆ ತೋರುತಲಿರುವಕ್ಷೇತ್ರ ಗದುಗಿನ ವೀರನಾರಾಯಣನಪಾತ್ರ ವಹಿಸಿದ ದಿವ್ಯಾಕೃತಿಯ 3
***