ಕಾಖಂಡಕಿ ಶ್ರೀ ಕೃಷ್ಣದಾಸರು
ಏನೆಂದು ಬಣ್ಣಿಸಲಿ ಗುರುರಾಯನಾ | ತಾ ನೆನೆದವರ ಧನ್ಯಗೈಸುವನಾ ಮಹಿಮೆ ಪ
ಧರಿಯೊಳಜ್ಞಾನ ತಮಹರಣ ಭಾಸ್ಕರ ನೆನಿಪ | ಕರ ಕಮಲದಲಿ ಜನಿಸೀ | ವರಮೂಲ ಮಂತ್ರವನೆ ಗುರು ಮಹಿಪತಿಯಂಬಾ | ನಿರುತ ಖ್ಯಾತಿಯ ನಾಮ ಧರಿಸಿ ಬಂದನ ಮಹಿಮೆ1
ಘನಸಾರ ವಿದ್ಯದಾಕಾರವೋ | ಶುದ್ಧಜ್ಞಾನ ಕಲ್ಪ ದ್ರುಮವಿನಾ | ಮುದ್ದು ಫಲವೋಯನಲು ಸಿದ್ಧ ಸಾಧಕರ ನಡು | ಗದ್ದುಗೆಯೊಳೆಸೆವ ಗುಣ ನದ್ವೀತಿಯನ ಮಹಿಮೆ 2
ಸ್ವಸ್ಥ ಮನದಿಂದ ಭಕುತಿ ಸ್ತವನ ಮಾಡಲಿಕೆ | ಮಸ್ತಕದ ಮ್ಯಾಲಭಯ ಹಸ್ತನೀಡೀ | ಅಸ್ತಿ ಭಾತಿ ಪ್ರಿಯಂ ವಸ್ತು ವಿದೇಶ ಸಕಲ ಹೃದ | ಯಸ್ಥನೆಂದನು ಭವವ ವಿಸ್ತರಿಸುವನ ಮಹಿಮೆ 3
ಆರಿಗಳವಡದಿಹ ನೈರಾಸ್ಯ ವೃತ್ತಿಯಾ | ತಾರದಲಿ ನಡೆದು ಮುನಿ ವೈರಾಗ್ಯದಾ | ಸಿರಿ ಸಂಪದವ ತೋರಿದನು ನೋಡಲಿಕೆ | ಸಾರ ಸಾಂಖ್ಯವು ಯೋಗ ದಾರಿ ಬಲ್ಲನ ಮಹಿಮೆ4
ಹೊಂದಿದ್ದವರ ಚಿದಾನಂದ ಸುಖಸಾಗರದಿ | ನಿಂದು ಲೋಲ್ಯಾಡಿಸಿದ ನಂದಿಗಿಂದು | ತಂದೆ ಮಹಿಪತಿ ತನ್ನ ದ್ವಂದ್ವಪಾದುಕೆಗಳನು | ನಂದನ ಸಿರದಲ್ಲಿಟ್ಟು ಛಂದ ನೋಡುವನ ಮಹಿಮೆ5
***