Showing posts with label ಹರಿವಿಠಲ ವಿಠಲ ಜಯ ವಿಠಲಾ lakshmikanta. Show all posts
Showing posts with label ಹರಿವಿಠಲ ವಿಠಲ ಜಯ ವಿಠಲಾ lakshmikanta. Show all posts

Sunday, 1 August 2021

ಹರಿವಿಠಲ ವಿಠಲ ಜಯ ವಿಠಲಾ ankita lakshmikanta

 ..


kruti by ಲಕ್ಷ್ಮೀನಾರಯಣರಾಯರು Lakshminarayanaru 


ಹರಿ ವಿಠಲ - ವಿಠಲ ಜಯ ವಿಠಲಾ

ಹರಿ ವಿಠಲ - ಜಯ ವಿಠಲ ಪ


ಜಯವಿಠಲಾ ನಮೋ ವಿಠಲಾ ಅ.ಪ


ಹೇ ಮುರಾರೀ ಶ್ರೀ ಹರೀ ಬಾರೈ ಕೃಪಾಶರನಿಧಿ ಶೌರೀ

ಶರಣಾಭರಣನೆಂದೆ ಬಿರುದನ್ನು ಕೇಳಿ ಬಂದೆ

ಅರಿಯೆ ಇನ್ನೊಂದ ತಂದೆ ನೀನಾಗಿ

ಪೊರೆಯೆಂದೆ ಇನ್ನು ಮುಂದೇ 1


ಇಂದಿರಾ ಮಂದಿರಾ ಹೇ ಸುಂದರಾನಂದ ಕುವರ ವರಾ

ಇಂದೀವರಾಕ್ಷ ನಿನ್ನಾ ಸಂದರುಶನವೆನ-

ಗೆಂದಿಗಾಹುದೋ ಮನವಾ

ನಂದ ಹೊಂದುವುದು ಅಂದೇ 2


ಸರ್ವೇಶಾ ಶಾಶ್ವತ ಸರ್ವೋತ್ತಮ ಪರಮೋದಾರವರ

ಸರ್ವಕಾರಣ ಕರ್ತಾ ಸರ್ವಸ್ವತಂತ್ರ ಶಕ್ತ

ಸರ್ವತ್ರದಲಿ ವ್ಯಾಪ್ತ

ಸರ್ವಾಂತರ್ಯಾಮಿ ಗುಪ್ತ ಶಿರಿಕಾಂತ 3

***