Showing posts with label ಹೀಗಿದ್ದವನೇ ತಿಳಿದವನು ನಿಜ ಯೋಗದ ಮಾರ್ಗಕ ಬೇಗ ಹೊಂದುವನು gurumahipati. Show all posts
Showing posts with label ಹೀಗಿದ್ದವನೇ ತಿಳಿದವನು ನಿಜ ಯೋಗದ ಮಾರ್ಗಕ ಬೇಗ ಹೊಂದುವನು gurumahipati. Show all posts

Wednesday 1 September 2021

ಹೀಗಿದ್ದವನೇ ತಿಳಿದವನು ನಿಜ ಯೋಗದ ಮಾರ್ಗಕ ಬೇಗ ಹೊಂದುವನು ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು

ಹೀಗಿದ್ದವನೇ ತಿಳಿದವನು | ನಿಜ | ಯೋಗದ ಮಾರ್ಗಕ ಬೇಗ ಹೊಂದುವನು ಪ 


ನೆಂಟರಿಷ್ಟರೊಳು ದಾಕ್ಷಿಣ್ಯಾ | ತನ್ನ | ಬಂಟ ಜನರ ಮ್ಯಾಲ ಘನ ಕಾರುಣ್ಯಾ | ಶುಂಠ ಶಠರೊಳು ಕಾಠಿಣ್ಯಾ | ತನ | ಗುಂಟಾದ ಸಾಧುಗಳೊಳು ಪ್ರೀತಿ ಬಣ್ಣಾ 1 

ಅರಸುಗಳಲಿ ನಮ್ರ ಸ್ಥಿತಿ | ಸರ್ವ | ವರಿತ ವಿದ್ವತ್ತರೋಳರ್ಜಿವ ವೃತ್ತಿ | ಅರಿಗಳೊಳಗೆ ಶೌರ್ಯ ಖ್ಯಾತಿ | ತನ್ನ | ಗುರುಗಳೊಳಗ ಭೆಜ್ಜರಂಜಿಕೆ ನೀತಿ 2 

ಹೆಂಗಳೆಯರೊಳು ಧೂರ್ತತನಾ | ತಾನು | ಹಿಂಗದೆ ಮಾಡುವ ಶ್ರವಣ ಮನನಾ | ತುಂಗ ಮಹಿಪತಿ ಸುತ ಪ್ರಿಯನಾ | ಮಂಗ | ಳಂಗುಟ ನೆನೆವನು ಬಿಡದನು ದಿನಾ 3

***