ಕಾಖಂಡಕಿ ಶ್ರೀ ಕೃಷ್ಣದಾಸರು
ಹೀಗಿದ್ದವನೇ ತಿಳಿದವನು | ನಿಜ | ಯೋಗದ ಮಾರ್ಗಕ ಬೇಗ ಹೊಂದುವನು ಪ
ನೆಂಟರಿಷ್ಟರೊಳು ದಾಕ್ಷಿಣ್ಯಾ | ತನ್ನ | ಬಂಟ ಜನರ ಮ್ಯಾಲ ಘನ ಕಾರುಣ್ಯಾ | ಶುಂಠ ಶಠರೊಳು ಕಾಠಿಣ್ಯಾ | ತನ | ಗುಂಟಾದ ಸಾಧುಗಳೊಳು ಪ್ರೀತಿ ಬಣ್ಣಾ 1
ಅರಸುಗಳಲಿ ನಮ್ರ ಸ್ಥಿತಿ | ಸರ್ವ | ವರಿತ ವಿದ್ವತ್ತರೋಳರ್ಜಿವ ವೃತ್ತಿ | ಅರಿಗಳೊಳಗೆ ಶೌರ್ಯ ಖ್ಯಾತಿ | ತನ್ನ | ಗುರುಗಳೊಳಗ ಭೆಜ್ಜರಂಜಿಕೆ ನೀತಿ 2
ಹೆಂಗಳೆಯರೊಳು ಧೂರ್ತತನಾ | ತಾನು | ಹಿಂಗದೆ ಮಾಡುವ ಶ್ರವಣ ಮನನಾ | ತುಂಗ ಮಹಿಪತಿ ಸುತ ಪ್ರಿಯನಾ | ಮಂಗ | ಳಂಗುಟ ನೆನೆವನು ಬಿಡದನು ದಿನಾ 3
***
No comments:
Post a Comment