Audio by Vidwan Sumukh Moudgalya
ರಾಗ : ಹಿಂದೋಳ ಆದಿತಾಳ
ಎಲ್ಲಿಗ್ಹೋಗಿ ಬಂದೆ ಹೇಳಯ್ಯಾ
ನಿಲ್ಲು ನಿಲ್ಲು ಗೋಪಾಲಕೃಷ್ಣಯ್ಯಾ॥ ಪ॥
ನಸಲಲ್ಲಿ ಕಿರುಬೆವರಿಕ್ಕ್ಯಾದೆ
ಹೊಸ ಪರಿ ಶುದ್ದಿಯು ಪುಟ್ಟೋದೆ
ಪುಶಿ ಎಲ್ಲ ನಿನ್ನ ಮಾತು ಮುಟ್ಟಿದೇ
ನಸುನಗಿಯಲ್ಲಿ ಕೀರ್ತಿ ಹೆಚ್ಚಿದೇ॥೧॥
ಬೆರಳಲಿಟ್ಟುಂಗುರ ಹೋಗಿದೆ
ಕೊರಳ ಪದಕವೆಲ್ಲಿ ನೀಗಿದೆ
ಹರಿ ನಿನ್ನ ಬದುಕೆಲ್ಲ ಸಾಗಿದೆ
ಆ ತರುಣಿಯ ಮಹಿಮೆ ಹೀಗಾಗಿದೆ॥೨॥
ಕಡು ಕಳ್ಳತನ ಹೀಗೆ ಮಾಡಿದೆ
ಕಡೆಯಿಂದ ಮೊದಲು ನಾ ನೋಡಿದೆ
ಬಿಡದೆ ಹರುಷದಿಂ ನೋಡಿದೆ ರಂಗ -
ವಿಠಲನ ಮಹಿಮೆ ಹೀಗಾಗ್ಯದೆ॥೩॥
****