ಪುರಂದರದಾಸರು
ದಾಸರ ನಿಂದಿಸಬೇಡ ಮನುಜ , ಹರಿ-
ದಾಸರ ನಿಂದಿಸ ಬೇಡ
ರಾಮನ ನಿಂದಿಸಿ ರಾವಣ ಕೆಟ್ಟ
ವಿಭೀಷಣಗಾಯಿತು ಪಟ್ಟ
ಭೂಮಿಯ ಲೋಭದಿ ಕೌರವ ಕೆಟ್ಟ
ಧರ್ಮಗೆ ರಾಜ್ಯವ ಬಿಟ್ಟ
ಉಡಿಯಲ್ಲಿ ಕೆಂಡವ ಕಟ್ಟಿಕೊಂಡರೆ
ಸುಡದಲೆ ಬಿಡುವುದೇನಣ್ಣ
ಪೊಡವಿಯ ಜನರಿಗೆ ಬಡತನ ಬಂದರೆ
ಬಿರುನುಡಿ ಆಡದಿರಣ್ಣ
ದೇವಕಿ ಸೆರೆಯನು ಬಿಡಿಸಿದ ದಾಸರು
ನರರೇನೈ ಈ ಜಗದೊಳು
ಭಾವಜನಯ್ಯನ ಭಕುತರ ಸೇವಿಸೆ
ಪಾವನ ಮಾಡುವ ಪುರಂದರ ವಿಠಲ
***
ದಾಸರ ನಿಂದಿಸಬೇಡ ಮನುಜ , ಹರಿ-
ದಾಸರ ನಿಂದಿಸ ಬೇಡ
ರಾಮನ ನಿಂದಿಸಿ ರಾವಣ ಕೆಟ್ಟ
ವಿಭೀಷಣಗಾಯಿತು ಪಟ್ಟ
ಭೂಮಿಯ ಲೋಭದಿ ಕೌರವ ಕೆಟ್ಟ
ಧರ್ಮಗೆ ರಾಜ್ಯವ ಬಿಟ್ಟ
ಉಡಿಯಲ್ಲಿ ಕೆಂಡವ ಕಟ್ಟಿಕೊಂಡರೆ
ಸುಡದಲೆ ಬಿಡುವುದೇನಣ್ಣ
ಪೊಡವಿಯ ಜನರಿಗೆ ಬಡತನ ಬಂದರೆ
ಬಿರುನುಡಿ ಆಡದಿರಣ್ಣ
ದೇವಕಿ ಸೆರೆಯನು ಬಿಡಿಸಿದ ದಾಸರು
ನರರೇನೈ ಈ ಜಗದೊಳು
ಭಾವಜನಯ್ಯನ ಭಕುತರ ಸೇವಿಸೆ
ಪಾವನ ಮಾಡುವ ಪುರಂದರ ವಿಠಲ
***
ರಾಗ ಮಾರವಿ. ಏಕ ತಾಳ (raga tala may differ in audio)
ದಾಸರ ನಿಂದಿಸಬೇಡಲೊ ಪ್ರಾಣಿ
ಹರಿದಾಸರ ನಿಂದಿಸಬೇಡ ಪ.
ಮೋಸವಾಯಿತೊ ಮನದೊಳು ಗಾಢ |ಲೇಸಾಗಿ ಇದ ತಿಳಕೊ ಮೂಢ ಅಪರಾಮನ ನಿಂದಿಸಿ ರಾವಣ ಕೆಟ್ಟ |ತಮ್ಮಗಾಯಿತು ಸ್ಥಿರಪಟ್ಟ ||ತಾಮಸದಿಂದಲಿ ಕೌರವ ಕೆಟ್ಟ |ಧರ್ಮಗೆ ರಾಜ್ಯವ ಬಿಟ್ಟ 1
ಮನದೊಳಗಿನ ವಿಷಯದ ವಿಷ ಬಿಟ್ಟು |ಅನುದಿನ ಹರಿಯ ನೆನೆಯಿರಣ್ಣ ||ಸನಕಾದಿವಂದ್ಯನ ಪೂಜಿಸಿದರೆ ನೀವ್ |ಘನಪದವಿಯ ಕಾಣುವಿರಣ್ಣ2
ಕನಕದಾಸನು ಕಬ್ಬಲಿಗನು ಎಂದು |ಅಣಕಿಸಿ ನುಡಿಬೇಡಿರಣ್ಣ |ಜನರಂತೆ ನರನಲ್ಲ ತುಂಬುರನೀತನು |ಜನಕಜೆರಮಣನ ಪಾದಸೇವಕನು 3
ಉಡಿಯ ಒಳಗೆ ಕಿಡಿ ಬಿದ್ದರೆ ಅದು ತಾ |ಸುಡದನಕಾ ಬಿಡದಣ್ಣ ||ಬಡವನಾಗಿ ಕೆಡುಬುದ್ದಿಯ ಬಿಟ್ಟು |ನಡೆಯ ಕಂಡು ಪಡೆದುಕೊಳ್ಳಣ್ಣ 4
ದೇವಕಿ ಸೆರೆಯನು ಬಿಡಿಸಿದ ದೇವನ |ಸೇವಕರು ನರರೆ ನಿಮಗವರು ||ಭಾವಜನಯ್ಯನ ಪದವ ನೆನೆದರೆ |ಪಾವನ ಮಾಡುವ ಪುರಂದರವಿಠಲ 5
*********
Maravi - Eka
pallavi
dAsara nindisa bEDa manuja haridAsara nindisa bEDa
caraNam 1
rAmana nindisi rAvaNa keTTa vibhISaNagAyitu paTTa
bhUmiya lObhadi kaurava keTTa dharmage rAjyava biTTa
caraNam 2
uDiyalli keNDava kaTTi koNDare suDadale biDuvudenaNNa
poDaviya janarige baDatana bandhare biDunuDi AdadiraNNa
caraNam 3
dEvaki sereyanu biDisida dAsaru nararEnai I jagadoLage
bhAvajanayyana bhakutara sEvise pAvana mADuva purandara viTTala
***
P: dAsara nindisa bEDa manuja haridAsara nindisa bEDa
C1: rAmana nindisi rAvaNa keTTa vibhISaNagAyitu paTTa
bhUmiya lObhadi kaurava keTTa dharmage rAjyava biTTa
2: uDiyalli keNDava kaTTi koNDare suDadale biDuvudenaNNa
poDaviya janarige baDatana bandhare biDunuDi AdadiraNNa
3: dEvaki sereyanu biDisida dAsaru nararEnai I jagadoLage
bhAvajanayyana bhakutara sEvisi pAvana mADuva purandara viTTala
***
Meaning: O man don’t insult/affront (nindisu) a Dasa. Don’t insult a Haridasa
C1: Ravana was destroyed (ketta) because he affronted Rama, which (resulted in) Vibhishana getting the throne(patta). Kaurava got destroyed due to his love for (vast) lands, and had to leave (bitta) his state (rajya) to Dharma.
C2: If I carry burning coal (kenda), it is surely going to burn (suduvudu) me. Please don’t loose talk (bidunudi), even if you become poor (badatana).
C3: The dasa who liberated Devaki were also a human in this world, purandaravithala will always protect his bhaktas.