ರಾಗ: ಬೇಹಾಗ್ ತಾಳ: ಆದಿ
ನಮಿಸುವೆ ಗುರುರಾಜ ಸುತೇಜ ಪ
ನಮಿಸುವೆ ಸುಜನರಕಲ್ಪಭೂಜ ಅ.ಪ
ಶರಣಜನಾವನ ಕರುಣಾಭರಣ
ಹರಿಚರಣಾರಾಧನಧುರೀಣ 1
ಮೂರಾವತಾರವೆತ್ತಿದ ಧೀರ
ಸಾರಿದವರ ಸಂತಾಪವಿದೂರ 2
ದ್ವಿಜಕುಲದೀಪ ಭವ್ಯಸ್ವರೂಪ
ಅಜರಾಮರ ಸತ್ಕೀರ್ತಿಪ್ರತಾಪ 3
e್ಞÁನವಿರಕ್ತಿ ನಿರ್ಮಲಭಕ್ತಿ
ಮಾಣದೆ ಕೊಡುವುದು ಮನಸಿಗೆ ಶಾಂತಿ 4
ವರಮಂತ್ರಾಲಯ ಸುರುಚಿರನಿಲಯ
ಕರಿಗಿರೀಶ ಶ್ರೀನರಹರಿಪ್ರಿಯ 5
***