Showing posts with label ಹೇ ಭಗವನ್ ನಾರಸಿಂಹ ನಖವಜ್ರಧರ vidyesha vittala. Show all posts
Showing posts with label ಹೇ ಭಗವನ್ ನಾರಸಿಂಹ ನಖವಜ್ರಧರ vidyesha vittala. Show all posts

Tuesday, 18 May 2021

ಹೇ ಭಗವನ್ ನಾರಸಿಂಹ ನಖವಜ್ರಧರ ankita vidyesha vittala

 ರಾಗ – ಅಮೃತವರ್ಷಿಣಿ 

ತಾಳ – ಆದಿತಾಳ


ಹೇ ಭಗವನ್ ನಾರಸಿಂಹ ನಖವಜ್ರಧರ 

ಹೇ ಗಗನದೇವ್ಯಾಲಿಂಗಿತ ದಿವ್ಯಶುಭಾಂಗ ll ಪ ll


ಬಾಗುವೆ ನಿನಗೆ ದಯಾನಯನ ವಜ್ರದಿ ನೀ 

ಯೋಗಸಿಂಹ ಎನ್ನ ಶಮಲಶೈಲವ ಸೀಳಿ ಸಲಹೋ ll ಅ ಪ ll


ಬಾಗಿದ ಬಾಲನ ನಂಬಿಕೆಯ ನುಡಿಯ ಪಾಲಿಸಲೆಂದು

ಮೃಗ-ನರಾರ್ಧ ರೂಪವತಾಳಿ ಸ್ತಂಭಸಂಭೂತನಾದೆ

ಬಾಗದ ದಿತಿಜನ ಅಂಕದಲಿಟ್ಟು ನಖಾಂಕುರದಿ ಸೀಳಿ ನೀ

ಮಗ 'ಅಜ'ನ ನುಡಿಯ ಪಾಲಿಸಿ 'ಋತಂಭರ'ನಾದೆ ll 1 ll


ಆ ವಿರುದ್ಧ ಅಣಿಮಾ-ಮಹಿಮಾದಿ ಧರ್ಮಗಳು ತನ್ನಲ್ಲಿ 

ಅವರುದ್ಧವಾಗದೆ ಮೇಳನಗೊಳುವವು ಎಂದು ನೀ ತೋರಲು 

ಸುವಿರುದ್ಧ ನರ-ಮೃಗತ್ವಗಳನು ಏಕತ್ರ ತೋರಿದೆ

ರವಸಿದ್ಧ 'ಈಶತ್ವ' ಸರ್ವತ್ರ ತನಗೆಂದು ತೋರಲು 'ಮೃಗೇಂದ್ರ'ನಾದೆ ll 2 ll


ನಮೋ ನಾಕನಾರಿಯರ ನಿಗಡಬಂಧನ ಬಿಡಿಸಿದ ಮೋಚಕಸಿಂಹ

ನಮೋ ಮೇಷಾತ್ಮಶಿವನ ಪಾಲಿಸಿ ಸತಿಗೆ ಸೌಭಾಗ್ಯವಿತ್ತ ಭದ್ರಸಿಂಹ

ನಮೋ ಶಕ್ರನ ವೃತ್ರಹನನ ಪಾಪಪಂಕವನು ಶೋಧಿಸಿದ ಶುಚಿಸಿಂಹ

ನಮೋ ವಿದ್ಯೇಶವಿಟ್ಠಲ ಕಾಯಲೆನ್ನ ಮನದಲಿ ನಿತ್ಯಮಿಂಚೋ ಮಹಾಸಿಂಹ ll 3 ***