Showing posts with label ವಂದಿಸುವಾನರ ಶ್ರೇಷ್ಠಗ್ವಂದಿಸು bheemesha krishna. Show all posts
Showing posts with label ವಂದಿಸುವಾನರ ಶ್ರೇಷ್ಠಗ್ವಂದಿಸು bheemesha krishna. Show all posts

Wednesday, 1 September 2021

ವಂದಿಸುವಾನರ ಶ್ರೇಷ್ಠಗ್ವಂದಿಸು ankita bheemesha krishna

 ..

ವಂದಿಸುವಾನರ ಶ್ರೇಷ್ಠಗ್ವಂದಿಸು ಪ

ಕೇಸರಿ ಸುತನಾದ ಭೂತನುಜಳ ವಾರ್ತೆ

ಲೇಸಾಗಿ ತಂದ ಪ್ರಾಣೇಶನ ಪಾದಕ್ಕೆ 1

ಸುಗ್ರೀವನಗ್ರಜನಾಗ್ರ(ಹ)ದಿ ಕೊಲಿಸಿದ ದ-

ಶಗ್ರೀವನ ಬಲ ನೆಗ್ಗೊತ್ತಿದ್ವಾನರಗೆ 2

ಭೂಮಿಗೊಡೆಯ ಸೀತಾರಾಮಸೇವಕನಂಘ್ರಿ

ಪ್ರೇಮದಿ ಭಜಿಸೋ ಭೀಮೇಶಕೃಷ್ಣನ ಭಕ್ತಗೆ3

***