..
kruti by ವೀರನಾರಾಯಣ Veeranarayana
ಬೇಡೆಲೊ ಜೀವಾ ಜನಿಸಲೆ ಬೇಡೋ ಪ
ಬೇಡ ನಿಜಸುಖ ದೊರೆಯದು ನೋಡೋ ಅ.ಪ
ಹೆಣ್ಣೋ ಗಂಡೋ ಆಗಿ ಮೆರೆಯುವೆಮಣ್ಣು ಹೊನ್ನಿಗೆ ನೀ ಹಾತೊರೆಯುವೆಉಣ್ಣುತ ಪ್ರಾರಬ್ಧವ ಬಾಯ್ದೆರೆಯುವೆಹಣ್ಣಾಗುವೆ ನೀ ಪರೀಕ್ಷೆ ಮಾಡೊ 1
ಆರು ಹಗೆಗಳು ಗಡ ಮುತ್ತುವವೊಮೂರು ತಾಪಗಳು ಕಡು ಹೊತ್ತುವವೊನೂರೊಂದೊಗಟಗಳಿರದೊತ್ತುವವೊಪಾರಾಗಲು ಬಿಡವೆಂದಿಗು ಕೇಡೋ 2
ಹುಟ್ಟು ಸಾವುಗಳ ಸುಳಿಯಲಿ ಸುತ್ತುವೆಒಟ್ಟು ಮರಳಿ ಸಂಚಿತವನು ಬಿತ್ತುವೆ ಗಟ್ಟಿಸಿ ಗದುಗಿನ ವೀರನಾರಾಯಣನೆಹುಟ್ಟಿಸಬೇಡೆಂದಿಚ್ಛಿಸಿ ಬೇಡೋ 3
***