Showing posts with label ಕಂಡೆನದ್ಭುತ ಮೂರ್ತಿಯನೂ ಹಿಂಡು ದೈವದಗಂಡ ವೇಲಾಪುರಾಧೀಶನನು vaikunta vittala. Show all posts
Showing posts with label ಕಂಡೆನದ್ಭುತ ಮೂರ್ತಿಯನೂ ಹಿಂಡು ದೈವದಗಂಡ ವೇಲಾಪುರಾಧೀಶನನು vaikunta vittala. Show all posts

Sunday, 1 August 2021

ಕಂಡೆನದ್ಭುತ ಮೂರ್ತಿಯನೂ ಹಿಂಡು ದೈವದಗಂಡ ವೇಲಾಪುರಾಧೀಶನನು ankita vaikunta vittala

 ..

kruti by ಬೇಲೂರು ವೈಕುಂಠ ದಾಸರು belur vaikunta dasaru


ಕಂಡೆನದ್ಭುತ ಮೂರ್ತಿಯನೂ

ಹಿಂಡು ದೈವದಗಂಡ ವೇಲಾಪುರಾಧೀಶನನು ಪ


ಪರಮಪದನಾಥ ಜಯ ಪರಮಪುರುಷನೆ ಜಯ

ಮರಮೇಷ್ಠಿಜನಕಜಯ ಪರಮಪಾವನನೆ ಜಯ

ಪರಮ ಸುಖವಾರ್ಧಿಜಯ ಪರಮಸುಜ್ಞಾನಿ ಜಯ

ಪರಮ ಶುಭಗಾತ್ರಜಯ ಪರಮಸಂತೋಷಿ ಜಯತು 1


ಪರಮಸ್ವತಂತ್ರಜಯ ಪರಮ ಕಾರಣನೆಜಯ

ಪರಮತ್ರಿಗುಣಾತ್ಮಜಯ ಪರಮಪಂಡಿತನೆ ಜಯ

ಪರಮಗುರುವರ್ಯಜಯ ಪರಮಮುನಿವಂದ್ಯಜಯ

ಪರಮ ಭಾಗವತ ಪ್ರಿಯ ಜಯಜಯತು2


ಸರ್ವೋತ್ತಮನೆ ಜಯಜಯತು ಸ್ವಾಮಿ

ಕರಿರಾಜವರದ ಜಯಜಯತು ಹರಿಯೇ

ಅರವಿಂದನಾಭ ಜಯಜಯತು ಅಸುರ

ಶರಧಿ ಬಡಬಾನಲನೆ ಜಯಜಯತು 3


ತರಳನ ಕಾಯ್ದವನೆ ಜಯಜಯತು ಶಿಶುವು

ಕರೆಯೆ ಬಂದವನೆ ಜಯಜಯತು ತಪವ

ಚರಿಸಿದನ ಕಾಯ್ದವನೆ ಜಯತು ನಿಜ

ಶರಣರಿಗೆ ಪದವನಿತ್ತವನೆ ಜಯಜಯತು 4

***