Showing posts with label ನಿನಗಾರು ಸರಿಯಿಲ್ಲ ಎನಗನ್ಯ ಗತಿಯಿಲ್ಲ purandara vittala NINAGAARU SARIYILLA ENAGANYA GATI YILLA. Show all posts
Showing posts with label ನಿನಗಾರು ಸರಿಯಿಲ್ಲ ಎನಗನ್ಯ ಗತಿಯಿಲ್ಲ purandara vittala NINAGAARU SARIYILLA ENAGANYA GATI YILLA. Show all posts

Thursday, 4 November 2021

ನಿನಗಾರು ಸರಿಯಿಲ್ಲ ಎನಗನ್ಯ ಗತಿಯಿಲ್ಲ purandara vittala NINAGAARU SARIYILLA ENAGANYA GATI YILLA

SUNG AS SHREEKRISHNA ANKITA
  

check ಕೃತಿ also by vyasarajaru 

ನಿನಗಾರು ಸರಿಯಿಲ್ಲ ಎನಗನ್ಯ ಗತಿಯಿಲ್ಲ
ನಿನಗೂ ಎನಗೂ ನ್ಯಾಯ ಹೇಳುವರಿಲ್ಲೋ || 

ಒಂದೇ ಗೂಡಿನಲ್ಲಿದ್ದು ಒಂದು ಕ್ಷಣವಗಲದೆ
ಎಂದೆಂದಿಗೂ ನಿನ್ನ ಪೊಂದಿರುವೆ
ಬಂಧ ವಿಷಯಗಳಿಗೆನ್ನನೊಪ್ಪಿಸುವುದು
ಇಂದು ನಿನಗೆ ಇದು ಉಚಿತವಲ್ಲವೊ ದೇವ ||

ಪರಸತಿಗಳುಕಲು ಪರಮಪಾಪಿಷ್ಠನೆಂದು
ಪರಿಪರಿ ನರಕಕ್ಕೆ ಸೇರಿಸುವೆ
ಪರಸತಿಯರೊಲುಮೆ ನಿನಗೆ ಒಪ್ಪಿತೊ ದೇವ
ದೊರೆತನಕಂಜಿ ನಾ ಶರಣೆಂಬೆನಲ್ಲದೆ |

ನಿನ್ನ ಧ್ಯಾನವನು ನಾ ನಿನ್ನ ಪ್ರೇರಣೆಯಿಂದ
ಅನಂತಕರ್ಮವನು ನಾ ಮಾಡಿದೆ
ಇನ್ನಾದರು ಎನ್ನ ದಯದಿಂದ ನೋಡಯ್ಯ
ಪನ್ನಗಶಯನ ಪುರಂದರವಿಠಲ ಕೃಷ್ಣ ||
****

ರಾಗ ಕೇದಾರಗೌಳ ತ್ರಿಪುಟತಾಳ (raga, taala may differ in audio)